ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯತಿ ನೀರ್ಚಾಲು ಗ್ರಾಮ ಕಚೇರಿ ವ್ಯಾಪ್ತಿಯ ಅನೆಬೈಲು ಎಂಬಲ್ಲಿ ನಿರಂತರವಾಗಿ ಸುರಿಯುವ ಮಳೆಯಿಂದಾಗಿ, ಗ್ರಾಮ ಪಂಚಾಯತಿ ರಸ್ತೆಯ ಬದಿಯಲ್ಲಿ ಕುಳಿ ರೂಪುಗೊಂಡಿದ್ದು ಸ್ಥಳೀಯರನ್ನು ಆತಂಕಕ್ಕೀಡುಮಾಡಿದೆ.
ಮೇಲ್ನೋಟಕ್ಕೆ ಸಣ್ಣ ರಂಧ್ರವಾಗಿ ಕಂಡುಬಂದರೂ ಒಳಗಡೆ ಆಳವಾಗಿ ಮಣ್ಣು ಕುಸಿತ ಉಂಟಾಗಿರುವುದು ವ್ಯಕ್ತವಾಗಿದೆ.
ನಿರಂತರ ಮಳೆ, ಮಳೆ ನೀರು ಹರಿದು ಸಾಗಲು ಚರಂಡಿ ವ್ಯವಸ್ಥೆಯ ಅವ್ಯವಸ್ಥತೆ ಮೊದಲಾದವುಗಳಿಂದ ವ್ಯಾಪಕ ಪ್ರಮಾಣದ ಹಾನಿಗಳು ವರದಿಯಾಗುತ್ತಿದೆ. ಹಲವೆಡೆ ವಿವಿಧ ಕೇಬಲ್ ಗಳು ಮತ್ತು ಪೈಫ್ ಲೈನ್ ಗಳಿಗಾಗಿ ಅಗೆದ ಪ್ರದೇಶಗಳಲ್ಲಿ ಮಣ್ಣೆದ್ದು ಮಳೆ ನೀರಿಗೆ ಕೊಚ್ಚಿ ಕಂದಕಗಳೂ ಸೃಷ್ಟಿಯಾಗುತ್ತಿದೆ. ಚರಂಡಿ ವ್ಯವಸ್ಥೆಯ ಅಪಕ್ವತೆಯಿಂದ ರಸ್ತೆಯಲ್ಲೇ ಮಳೆ ನೀರು ಹರಿದು ರಸ್ತೆ ಸುರಕ್ಷತೆಗೆ ಭಾರೀ ಧಕ್ಕೆಯಾಗಿರುವುದು ಕಂಡುಬರುತ್ತಿದೆ.
ಆನೆಬೈಲಿನಲ್ಲಿ ಉಂಟಾದ 'ಅವ್ಯಕ್ತ ಕುಳಿ' ಭೀತಿಗೆ ಕಾರಣವಾಗಿದ್ದು, ಈ ಬಗ್ಗೆ ನೀರ್ಚಾಲು ಗ್ರಾಮಾಧಿಕಾರಿಗಳಿಗೆ ಸ್ಥಳೀಯರು ಈಗಾಗಲೇ ದೂರು ನೀಡಿದ್ದಾರೆ. ಸಂಬಂಧಪಟ್ಟವರು ಗಮನಹರಿಸಬೇಕಾಗಿ ವಿನಂತಿಸಲಾಗಿದೆ.




.jpg)
.jpg)
.jpg)
