ಉಪ್ಪಳ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಅತಿಸಾರ ರೋಗಗಳನ್ನು ತಡೆಗಟ್ಟಲು ನಡೆಸಲಾಗುತ್ತಿರುವ 'ಅತಿಸಾರ ನಿಲ್ಲಿಸಿ' ಅಭಿಯಾನದ ಭಾಗವಾಗಿ ಕೇರಳ ಸರ್ಕಾರ ಜಿಲ್ಲೆಯಲ್ಲಿ ತಡೆಗಟ್ಟುವ ಚಟುವಟಿಕೆಗಳನ್ನು ತೀವ್ರಗೊಳಿಸಿದೆ.
ಜೂನ್ ಮತ್ತು ಜುಲೈ ತಿಂಗಳುಗಳಲ್ಲಿ ಜಾರಿಗೆ ತರಲಾದ ಅತಿಸಾರ ನಿಲ್ಲಿಸಿ ಅಭಿಯಾನದ ಜಿಲ್ಲಾ ಮಟ್ಟದ ಉದ್ಘಾಟನೆ ಮತ್ತು ವಿಚಾರ ಸಂಕಿರಣ, ಜುಲೈ 25 ರಿಂದ 31 ರವರೆಗೆ ಆಚರಿಸಲಾದ ಒಆರ್‍ಎಸ್ ಸಪ್ತಾಹ ಮತ್ತು ಜುಲೈ 29 ರಂದು ನಡೆದ ಒಆರ್‍ಎಸ್ ದಿನವನ್ನು ಮಂಗಲ್ಪಾಡಿ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿತ್ತು. ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಶಮೀನಾ ಟೀಚರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಂಗಲ್ಪಾಡಿ ಗ್ರಾಮ ಪಂಚಾಯತಿ ಅಧ್ಯಕ್ಷೆ ರುಬಿನಾ ನೌಫಲ್ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಬ್ಲಾಕ್ ಪಂಚಾಯತಿ ಉಪಾಧ್ಯಕ್ಷ ಪಿ.ಕೆ. ಹನೀಫ್, ಆರೋಗ್ಯ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಇರ್ಫಾನಾ ಇಕ್ಬಾಲ್, ಅಭಿವೃದ್ಧಿ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಖೈರುನ್ನಿಸಾ ಉಮ್ಮರ್, ಕುಟುಂಬಶ್ರೀ ಮಿಷನ್ ಜಿಲ್ಲಾ ಸಂಯೋಜಕಿ ಕೆ.ರತೀಶ್ ಕುಮಾರ್, ಮಂಗಲ್ಪಾಡಿ ತಾಲ್ಲೂಕು ಆಸ್ಪತ್ರೆ ಅಧೀಕ್ಷಕ ಡಾ. ಅಶೋಕ್ ಕೆ, ಎಡಿಎಂಸಿ ಕುಟುಂಬಶ್ರೀ ಜಿಲ್ಲಾ ಮಿಷನ್ ಸೌದಾ ಸಿಎಂ, ಆರೋಗ್ಯ ನಿರೀಕ್ಷಕ ಚಂದ್ರಶೇಖರನ್ ತಂಬಿ ಮಾತನಾಡಿದರು. ಜಿಲ್ಲಾ ಶಿಕ್ಷಣ ಮತ್ತು ಮಾಧ್ಯಮ ಅಧಿಕಾರಿ ಅಬ್ದುಲ್ ಲತೀಫ್ ಮಠತ್ತಿಲ್ ಸ್ವಾಗತಿಸಿ, ಸಿಡಿಎಸ್ ಅಧ್ಯಕ್ಷೆ ಸುಶೀಲಾ ಕೆ.ವಿ. ವಂದಿಸಿದರು.
ಕಾಸರಗೋಡು ಜಿಲ್ಲಾ ವೈದ್ಯಕೀಯ ಕಚೇರಿ (ಆರೋಗ್ಯ), ರಾಷ್ಟ್ರೀಯ ಆರೋಗ್ಯ ಮಿಷನ್, ಜಿಲ್ಲಾ ಕುಟುಂಬಶ್ರೀ ಮಿಷನ್ ಮತ್ತು ಐಎಪಿ ಕಾಸರಗೋಡು ಜಂಟಿ ಆಶ್ರಯದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಅತಿಸಾರ ಚಿಕಿತ್ಸೆಯಲ್ಲಿ ಒಆರ್.ಎ.ಸಿ.ಯ ಮಹತ್ವ, ಒ.ಆರ್.ಎಸ್. ನ್ನು ಹೇಗೆ ತಯಾರಿಸುವುದು, ಆಹಾರ, ಪಾನೀಯಗಳ ಮಹತ್ವ, ಅತಿಸಾರ ತಡೆಗಟ್ಟುವಲ್ಲಿ ವೈಯಕ್ತಿಕ ನೈರ್ಮಲ್ಯ ಮತ್ತು ನಿರ್ಜಲೀಕರಣದ ಅಪಾಯಗಳು ಮುಂತಾದ ವಿವಿಧ ವಿಷಯಗಳ ಕುರಿತು ಜಾಗೃತಿ ಮೂಡಿಸಲು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಭಾಗವಾಗಿ ನಡೆದ ಜಾಗೃತಿ ವಿಚಾರ ಸಂಕಿರಣದಲ್ಲಿ, ಮಕ್ಕಳ ತಜ್ಞ ಮತ್ತು ಐಎಪಿ ಕಾಸರಗೋಡು ವಿಭಾಗ ಅಧ್ಯಕ್ಷ ಡಾ. ದಿವಾಕರ ರೈ ಮತ್ತು ಮಂಗಲ್ಪಾಡಿ ತಾಲ್ಲೂಕು ಆಸ್ಪತ್ರೆಯ ಸಾರ್ವಜನಿಕ ಆರೋಗ್ಯ ದಾದಿ ಸಿನಿ ಸೆಬಾಸ್ಟಿಯನ್ ಅವರು ಪ್ರಸ್ತುತಿಗಳನ್ನು ನೀಡಿದರು.




.jpeg)
