HEALTH TIPS

ಟ್ರಂಪ್- ಪುಟಿನ್ ಶೃಂಗಸಭೆ: ಸ್ಟಾರ್ಮರ್‌ ಭೇಟಿಯಾದ ಝೆಲೆನ್‌ಸ್ಕಿ

ಕೀವ್‌: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಗುರುವಾರ ಬೆಳಿಗ್ಗೆ ಬ್ರಿಟನ್‌ ಪ್ರಧಾನಿ ಕಿಯರ್‌ ಸ್ಟಾರ್ಮರ್‌ ಅವರನ್ನು ಲಂಡನ್‌ನಲ್ಲಿ ಭೇಟಿಯಾಗಿ ಚರ್ಚೆ ನಡೆಸಿದರು. ಉಕ್ರೇನ್‌ ಯುದ್ಧ ಕೊನೆಗೊಳಿಸುವ ಸಂಬಂಧ ಶುಕ್ರವಾರ ಅಲಾಸ್ಕಾದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಭೇಟಿಯಾಗಿ ಮಾತುಕತೆ ನಡೆಸಲಿರುವ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದುಕೊಂಡಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಯುರೋಪ್‌ನ ಹಲವು ನಾಯಕರ ಜೊತೆಗೆ ಬುಧವಾರ ವರ್ಚುವಲ್‌ ಸಭೆ ನಡೆಸಿದ ಮರುದಿನವೇ ಝೆಲೆನ್‌ಸ್ಕಿ ಲಂಡನ್‌ಗೆ ಭೇಟಿ ನೀಡಿದರು. ಈ ವೇಳೆ ಉಭಯ ನಾಯಕರು ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿದರು.

'ಅಲಾಸ್ಕಾ ಶೃಂಗಸಭೆಯು ಅತ್ಯಂತ ಮುಖ್ಯವಾಗಿದ್ದು, ಉಕ್ರೇನ್‌ ಸಂಘರ್ಷ ಕೊನೆಗಾಣಿಸಲು ಕಾರ್ಯಸಾಧುವಾದ ಮಾರ್ಗವಾಗಿದೆ. ಆದರೆ, ರಷ್ಯಾಕ್ಕೆ ಭೂಪ್ರದೇಶ ಬಿಟ್ಟುಕೊಡಲು ಡೊನಾಲ್ಡ್‌ ಟ್ರಂಪ್‌ ಒತ್ತಾಯಿಸಬಹುದೆಂದು ಯುರೋಪ್‌ ರಾಷ್ಟ್ರಗಳು ಕಳವಳ ವ್ಯಕ್ತಪಡಿಸಿವೆ. ಅಗತ್ಯ ಬಿದ್ದರೆ, ರಷ್ಯಾದ ಮೇಲೆ ಒತ್ತಡ ಹೇರಲು ಐರೋಪ್ಯ ಒಕ್ಕೂಟವು ಮುಂದಾಗಲಿದೆ' ಎಂದು ಸ್ಟಾರ್ಮರ್‌ ಅವರು ಈ ವೇಳೆ ಝೆಲೆನ್‌ಸ್ಕಿಗೆ ಭರವಸೆ ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries