ಮಲಪ್ಪುರಂ: ಮುಸ್ಲಿಂ ಯೂತ್ ಲೀಗ್ ಮಲಪ್ಪುರಂ ಜಿಲ್ಲಾ ಕಾರ್ಯದರ್ಶಿ ಮತ್ತು ಜಿಲ್ಲಾ ಪಂಚಾಯತ್ ಸದಸ್ಯ ಟಿ.ಪಿ. ಹ್ಯಾರಿಸ್ ಅವರನ್ನು 14 ದಿನಗಳ ಕಾಲ ಪೋಲೀಸ್ ವಶಕ್ಕೆ ನೀಡಲಾಗಿದೆ. ಮಲಪ್ಪುರಂ ನ್ಯಾಯಾಲಯವು ವಿಚಾರಣೆಯನ್ನು ಮುಂದೂಡಿದೆ.
ಹ್ಯಾರಿಸ್‍ರನ್ನು ಮಂಜೇರಿ ಉಪ ಜೈಲಿನಲ್ಲಿ ಇರಿಸಲಾಗಿದೆ. ಮಲಪ್ಪುರಂ ಜಿಲ್ಲಾ ಪಂಚಾಯತ್ ಯೋಜನೆಗಳ ಹೆಸರಿನಲ್ಲಿ 25 ಕೋಟಿ ರೂ. ವಂಚನೆ ಮಾಡಿದ್ದಾರೆ ಎಂಬ ದೂರಿನ ಮೇರೆಗೆ ಹ್ಯಾರಿಸ್‍ರನ್ನು ಪೋಲೀಸರು ಮೊನ್ನೆ ವಶಕ್ಕೆ ಪಡೆದಿದ್ದರು. ಅವರನ್ನು ಮುಂಬೈ ವಿಮಾನ ನಿಲ್ದಾಣದಿಂದ ಬಂಧಿಸಲಾಗಿತ್ತು.
ಜಿಲ್ಲಾ ಪಂಚಾಯತ್ ಜಾರಿಗೆ ತಂದ ಯೋಜನೆಗಳಿಗೆ ಗುತ್ತಿಗೆ ನೀಡುವುದಾಗಿ ಭರವಸೆ ನೀಡುವ ಮೂಲಕ ಹ್ಯಾರಿಸ್ ಹಣವನ್ನು ದುರುಪಯೋಗಪಡಿಸಿದ್ದರು.




