HEALTH TIPS

ಬಳಕೆದಾರರ ಸುರಕ್ಷತೆ ಖಾತರಿಪಡಿಸಲು ವಾಟ್ಸ್‌ಆಯಪ್‌ ಹೊಸ ಕ್ರಮ

 ಬಳಕೆದಾರರ ಸುರಕ್ಷತೆಯನ್ನು ಖಾತರಿಪಡಿಸುವ ಉದ್ದೇಶದಿಂದ ವಾಟ್ಸ್‌ಆಯಪ್‌ ಹೊಸ ಸೌಲಭ್ಯವೊಂದನ್ನು ಜಾರಿಗೆ ತಂದಿದೆ.

ವಾಟ್ಸ್‌ಆಯಪ್‌ ಬಳಕೆದಾರರ ಸಂಪರ್ಕಗಳ ಪಟ್ಟಿಯಲ್ಲಿ ಇಲ್ಲದ ವ್ಯಕ್ತಿಯೊಬ್ಬರು ಅವರನ್ನು ಹೊಸ ಗುಂಪಿಗೆ ಸೇರಿಸಿದಾಗ, ಅದರ ಬಗ್ಗೆ ಆ ಬಳಕೆದಾರರಿಗೆ ಸಂದೇಶ ರವಾನಿಸುವ ಕೆಲಸವನ್ನು ಹೊಸ ವ್ಯವಸ್ಥೆಯು ಮಾಡುತ್ತದೆ.

'ಸೇಫ್ಟಿ ಓವರ್‌ವ್ಯೂ' ಹೆಸರಿನ ಈ ಸೌಲಭ್ಯವು ಹೊಸ ಗುಂಪಿನ ಬಗ್ಗೆ ಪ್ರಮುಖವಾದ ಮಾಹಿತಿಯನ್ನು ಒದಗಿಸುತ್ತದೆ, ಸುರಕ್ಷಿತವಾಗಿರಲು ಏನು ಮಾಡಬೇಕು ಎಂಬ ಸಲಹೆಯನ್ನು ನೀಡುತ್ತದೆ.

'ಅಲ್ಲಿಂದ, ಬಳಕೆದಾರರು ಗ್ರೂಪ್‌ನಲ್ಲಿನ ಮಾತುಕತೆಗಳನ್ನು ಗಮನಿಸದೆಯೇ ಅದರಿಂದ ಹೊರನಡೆಯಬಹುದು' ಎಂದು ವಾಟ್ಸ್‌ಆಯಪ್‌ ತಿಳಿಸಿದೆ.

ಗ್ರೂಪ್‌ನಲ್ಲಿ ಇರಲು ತಾನು ಬಯಸುವುದಾಗಿ ಬಳಕೆದಾರ ತಿಳಿಸುವವರೆಗೂ ಆ ಗ್ರೂಪ್‌ನಲ್ಲಿನ ಸಂದೇಶಗಳ ಬಗ್ಗೆ ಬಳಕೆದಾರರಿಗೆ ನೋಟಿಫಿಕೇಷನ್‌ ರವಾನೆ ಆಗುವುದಿಲ್ಲ.

ವ್ಯಕ್ತಿಯೊಬ್ಬ ತನ್ನ ಸಂಪರ್ಕ ಪಟ್ಟಿಯಲ್ಲಿ ಇಲ್ಲದ ವ್ಯಕ್ತಿಯ ಜೊತೆ ಚಾಟಿಂಗ್ ಆರಂಭಿಸಿದಾಗ ಆ ವ್ಯಕ್ತಿಯ ಬಗ್ಗೆ ಇನ್ನಷ್ಟು ಮಾಹಿತಿ ಒದಗಿಸಿ, ಬಳಕೆದಾರರಿಗೆ ಎಚ್ಚರಿಕೆ ನೀಡುವ ಸೌಲಭ್ಯ ರೂಪಿಸುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ವಾಟ್ಸ್‌ಆಯಪ್‌ ಹೇಳಿದೆ.

ಈ ವರ್ಷದ ಮೊದಲ ಆರು ತಿಂಗಳಲ್ಲಿ, ವಂಚನೆಯ ಕೇಂದ್ರಗಳಿಗೆ ಸಂಬಂಧಿಸಿದ 68 ಲಕ್ಷ ಖಾತೆಗಳನ್ನು ವಾಟ್ಸ್‌ಆಯಪ್‌ ಬಂದ್ ಮಾಡಿದೆ.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries