ಮಂಜೇಶ್ವರ: ಪಾವೂರು ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ (ರಿ) ಬಜಾಲ್ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಪಾವೂರು ಇದರ ಜಂಟಿ ಆಶ್ರಯದಲ್ಲಿ ಆ. 15ರಂದು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ವಠಾರದಲ್ಲಿ ಮೊಸರು ಕುಡಿಕೆ ಉತ್ಸವ ನಡೆಯಲಿರುವುದು.
ಬೆಳಿಗ್ಗೆ 10ಕ್ಕೆ ಮೊಸರು ಕುಡಿಕೆ ಕಾರ್ಯಕ್ರಮವನ್ನು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷ ಮನೋಹರ್ ಶೆಟ್ಟಿ ಕೆದುಂಬಾಡಿ ಉದ್ಘಾಟಿಸುವರು. ನಂತರ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿರುವುದು. ಸಂಜೆ 5ಕ್ಕೆ ನಡೆಯುವ ಸಮರೋಪ ಸಮಾರಂಭದಲ್ಲಿ ಭಜನಾ ಮಂಡಳಿ ಅಧ್ಯಕ್ಷ ಮೋನಪ್ಪ ಶೆಟ್ಟಿ ಮುಟ್ಲ ಅಧ್ಯಕ್ಷತೆ ವಹಿಸುವರು. ಸಭೆಯಲ್ಲಿ ಶ್ರೀಧರ ಶೆಟ್ಟಿ ಪಾವೂರು, ವಿಶ್ವಂಭರ ನಾಯ್ಕ್ ಮಳಿಗುತ್ತು, ಗಣೇಶ್ ಟೈಲರ್ ಪಾವೂರು, ದಯಾನಂದ ಸಾಲಿಯಾನ್ ಕೊಪ್ಪಳ, ತ್ಯಾಂಪಣ್ಣ ರೈ ಪಾವೂರು, ಕೋಟಿಯಪ್ಪ ಪೂಜಾರಿ ಕೊಪ್ಪಳ ಅತಿಥಿಗಳಾಗಿ ಭಾಗವಹಿಸುವರು. ನಂತರ ವಿವಿಧ ಭಜನಾ ಮಂಡಳಿಯವರಿಂದ ಭಜನಾ ಸಂಕೀರ್ತನೆ ನಡೆಯಲಿರುವುದು.




