ಕೊಚ್ಚಿ: ಅಹಮದಾಬಾದ್‍ನಲ್ಲಿ ನಡೆದ 51ನೇ ರಾಷ್ಟ್ರೀಯ ಜೂನಿಯರ್ ಈಜು ಚಾಂಪಿಯನ್‍ಶಿಪ್‍ನಲ್ಲಿ ಗ್ರೂಪ್ ಟು ಬಾಲಕರ 50ಮೀ ಬ್ಯಾಕ್‍ಸ್ಟ್ರೋಕ್‍ನಲ್ಲಿ ಜೋಸ್ ನಿಜು ಕೊಟ್ಟೂರ್ ಬೆಳ್ಳಿ ಪದಕ ಗಳಿಸಿಕೊಂಡಿದ್ದಾನೆ.
ಜೋಸ್ ನಿಜು ಕೊಟ್ಟೂರ್ ತ್ರಿಪುನಿತ್ತುರ ಚಾಯ್ಸ್ ಶಾಲೆಯ ಒಂಬತ್ತನೇ ತರಗತಿಯ ವಿದ್ಯಾರ್ಥಿ. 50ಮೀ ಬ್ಯಾಕ್‍ಸ್ಟ್ರೋಕ್‍ನಲ್ಲಿ ಈತ 30.57 ಸೆಕೆಂಡುಗಳಲ್ಲಿ ಎರಡನೇ ಸ್ಥಾನ ಪಡೆದ. ಈ ವರ್ಷ ಜುಲೈನಲ್ಲಿ ತಿರುವನಂತಪುರದಲ್ಲಿ ನಡೆದ 51ನೇ ರಾಜ್ಯ ಜೂನಿಯರ್ ಈಜು ಚಾಂಪಿಯನ್‍ಶಿಪ್‍ನಲ್ಲಿ ಜೋಸ್ ನಿಜು ಐದು ಚಿನ್ನದ ಪದಕಗಳನ್ನು ಗೆದ್ದಿದ್ದ.




