ತಿರುವನಂತಪುರಂ: ಹಾಲಿನ ಬೆಲೆಯನ್ನು ಹೆಚ್ಚಿಸುವ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಮಿಲ್ಮಾ ಅಧ್ಯಕ್ಷ ಕೆ.ಎಸ್. ಮಣಿ ಹೇಳಿದ್ದಾರೆ. ಓಣಂ ವರೆಗೆ ಹಾಲಿನ ಬೆಲೆಯನ್ನು ಹೆಚ್ಚಿಸಲಾಗುವುದಿಲ್ಲ. ಓಣಂ ನಂತರ ಮಂಡಳಿ ಮತ್ತೆ ಸಭೆ ಸೇರಿ ನಿರ್ಧರಿಸಲಿದೆ ಎಂದವರು ತಿಳಿಸಿದ್ದಾರೆ.
ರೈತರ ಹಿತಾಸಕ್ತಿಗಳನ್ನು ರಕ್ಷಿಸಬೇಕು ಮತ್ತು ತಜ್ಞರ ಸಮಿತಿ ವರದಿಯನ್ನು ಸ್ವೀಕರಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕೆ.ಎಸ್. ಮಣಿ ಹೇಳಿದರು.
ತಿರುವನಂತಪುರಂ, ಎರ್ನಾಕುಲಂ ಮತ್ತು ಮಲಬಾರ್ ಒಕ್ಕೂಟಗಳು ಬೆಲೆ ಏರಿಕೆಗೆ ಶಿಫಾರಸು ಮಾಡಿದ್ದವು. ಹಾಲಿನ ಬೆಲೆಯನ್ನು ರೂ. 60 ಕ್ಕೆ ಹೆಚ್ಚಿಸುವುದು ಶಿಫಾರಸ್ಸಾಗಿತ್ತು. ನಂತರದ ಮಂಡಳಿ ಸಭೆಯಲ್ಲಿ, ಹಾಲಿನ ಬೆಲೆಯನ್ನು ತಕ್ಷಣ ಹೆಚ್ಚಿಸದಿರಲು ನಿರ್ಧರಿಸಲಾಯಿತು. ರಾಜ್ಯದಲ್ಲಿ ಹಿಂದಿನ ಹಾಲಿನ ಬೆಲೆ ಹೆಚ್ಚಳವು ಡಿಸೆಂಬರ್ 2022 ರಲ್ಲಿ ಆಗಿತ್ತು.




