ಮುಳ್ಳೇರಿಯ: ಅಟೋ ಟ್ಯಾಕ್ಸಿ ಚಾಲನೆ ವೇಳೆ ರಸ್ತೆಯಲ್ಲಿ ಬಿದ್ದು ಸಿಕ್ಕಿದ ಪರ್ಸ್ ಮರಳಿಸಿ ಚಾಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಕಿನ್ನಿಂಗಾರಿನಲ್ಲಿ ಬಾಡಿಗೆ ಮಾಡುವ ಅಟೋ ಟ್ಯಾಕ್ಸಿ ಚಾಲಕ ರಾಮ ಕಿನ್ನಿಂಗಾರು ಸುಳ್ಯ ತಾಲೂಕು ನಿಂತಿಕಲ್ಲು ನಿವಾಸಿ ಮೊಹಮ್ಮದ್ ಎಂಬವರಿಗೆ ಪರ್ಸ್ ಮರಳಿಸಿದ್ದಾರೆ.
ಮೊಹಮ್ಮದ್ ಕೆಲಸ ನಿಮಿತ್ತ ಮಂಗಳವಾರ ಬೆಳಗ್ಗೆ ತನ್ನ ಸ್ಕೂಟರ್ ನಲ್ಲಿ ಕಿನ್ನಿಂಗಾರು ಸ್ವರ್ಗ ದಾರಿಯಾಗಿ ಕನ್ಯಾರುಮೂಲೆ ಬಂದಿದ್ದರು. ಕನ್ಯಾರುಮೂಲೆ ತಲಪಿದ ವೇಳೆ ನಗದು, ಚುನಾವಣಾ ಗುರುತಿ ಚೀಟಿ, ಲೆಕ್ಕ ಪತ್ರ ಇತರ ದಾಖಲೆಗಳನ್ನು ಒಳಗೊಂಡ ಪರ್ಸ್ ಕಳೆದುಕೊಂಡ ವಿಚಾರ ಗಮನಕ್ಕೆ ಬಂದಿದೆ. ಕೆಲಸದ ಸ್ಥಳ ಹಾಗೂ ರಸ್ತೆಯಲ್ಲಿ ಹುಡುಕಾಡಿದರೂ ಪರ್ಸ್ ಲಭಿಸಿರಲಿಲ್ಲ.
ಸ್ವರ್ಗ ತಲುಪಿದ ಅವರು ಅಲ್ಲಿನ ಅಟೋ ಚಾಲಕರಲ್ಲಿ ಪರ್ಸ್ ಕಳೆದುಕೊಂಡ ವಿಚಾರ ತಿಳಿಸಿದ್ದರು. ಸ್ವರ್ಗದ ಅಟೋ ಚಾಲಕರು ತಿಳಿಸಿದಂತೆ ಸ್ಥಳೀಯ ಪತ್ರಕರ್ತ ಅಜಿತ್ ಸ್ವರ್ಗ ಅವರಿಗೆ ಮಾಹಿತಿ ನೀಡಿದ್ದರು. ಅಜಿತ್ ತನ್ನ ಫೇಸ್ ಬುಕ್ ಖಾತೆ, ವಾಟ್ಸಾಪ್ ಗುಂಪುಗಳಲ್ಲಿ ಮೊಹಮ್ಮದ್ ಪರ್ಸ್ ಕಳೆದುಕೊಂಡ ವಿಷಯ ಶೇರ್ ಮಾಡಿದ್ದರು.
ಇದೇ ವೇಳೆ, ಕಿನ್ನಿಂಗಾರು ಸಮೀಪ ಸರಳಿಮೂಲೆ ಈಂದುಮೂಲೆ ಜಂಕ್ಷನ್ ನಲ್ಲಿ ಅಟೋ ಟ್ಯಾಕ್ಸಿ ಚಾಲಕ ರಾಮ ಕಿನ್ನಿಂಗಾರು ಎಂಬವರಿಗೆ ಪರ್ಸ್ ಲಭಿಸಿದ್ದರೂ ವಾರಿಸುದಾರರ ಮಾಹಿತಿ ಇರಲಿಲ್ಲ. ಪರ್ಸ್ ನಲ್ಲಿ ವಿಳಾಸ, ಮೊಬೈಲ್ ಸಂಖ್ಯೆ ಇರಲಿಲ್ಲ. ಈ ಮಧ್ಯೆ ವಾಟ್ಸಾಪ್ ಗ್ರೂಪ್ ಗಳಲ್ಲಿ ಹರಿದಾಡಿದ ಪೆÇೀಸ್ಟ್ ಗಮನಿಸಿದ ರಾಮ, ಅಜಿತ್ ಅವರನ್ನು ಸಂಪರ್ಕಿಸಿ ಮಹಮ್ಮದ್ ಅವರಿಗೆ ಪರ್ಸ್ ಮರಳಿಸಿದ್ದಾರೆ. 7 ಸಾವಿರ ರೂ.ನಗದು ಹಾಗೂ ದಾಖಲೆಗಳಿದ್ದ ಪರ್ಸ್ ಮರಳಿಸಿದ ರಾಮ ಅವರ ಪ್ರಾಮಾಣಿಕತೆಗೆ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.





.jpg)
