ಯೂರಿಕ್ ಆಮ್ಲ ಹೆಚ್ಚಾದಾಗ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಬಹಳ ಮುಖ್ಯ. ಸರಿಯಾದ ಆಹಾರದಿಂದ ಯೂರಿಕ್ ಆಮ್ಲದ ಮಟ್ಟವನ್ನ ನಿಯಂತ್ರಿಸಬಹುದು, ಆದರೆ ಕೆಲವು ಆಹಾರಗಳು ಈ ಸಮಸ್ಯೆಯನ್ನು ಉಲ್ಬಣಗೊಳಿಸಬಹುದು. ಯೂರಿಕ್ ಆಮ್ಲ ಹೆಚ್ಚಾದಾಗ ಏನು ತಿನ್ನಬೇಕು ಮತ್ತು ಯಾವುದನ್ನ ತಿನ್ನಬಾರದು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ...
ಯೂರಿಕ್ ಆಮ್ಲ ಹೆಚ್ಚಾದಾಗ ಏನು ತಿನ್ನಬೇಕು?
ಯೂರಿಕ್ ಆಮ್ಲ ಹೆಚ್ಚಾದಾಗ ನೀವು ನಿಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಸಾಕಷ್ಟು ನೀರು ಕುಡಿಯಬೇಕು. ದೇಹದಿಂದ ಹೆಚ್ಚುವರಿ ಯೂರಿಕ್ ಆಮ್ಲವನ್ನ ಹೊರಹಾಕಲು ನೀರು ಸಹಾಯ ಮಾಡುತ್ತದೆ. ನಿಮ್ಮ ಆಹಾರದಲ್ಲಿ ಫೈಬರ್ ಭರಿತ ಆಹಾರವನ್ನು ಸೇರಿಸಬೇಕು. ಆಹಾರದಲ್ಲಿ ಹಾಲು, ಮೊಸರು ಮತ್ತು ಮಜ್ಜಿಗೆ ಸೇವನೆಯು ಪ್ರಯೋಜನಕಾರಿ. ಏಕೆಂದರೆ ಅವು ಯೂರಿಕ್ ಆಮ್ಲದ ಮಟ್ಟವನ್ನ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ಆಹಾರದಲ್ಲಿ ವಿಟಮಿನ್ ʼಸಿʼ ಸಮೃದ್ಧವಾಗಿರುವ ಹಣ್ಣುಗಳು ಮತ್ತು ತರಕಾರಿಗಳನ್ನ ಸೇರಿಸಬೇಕು. ಇದು ಯೂರಿಕ್ ಆಮ್ಲವನ್ನ ಕರಗಿಸಲು ಸಹಾಯ ಮಾಡುತ್ತದೆ ಮತ್ತು ಅದನ್ನ ಹೊರಹಾಕಲು ಸಹಾಯ ಮಾಡುತ್ತದೆ. ಕೆಲವು ವರದಿಗಳ ಪ್ರಕಾರ, ಸೀಮಿತ ಪ್ರಮಾಣದಲ್ಲಿ ಹೆಸರುಬೇಳೆ ಸೇವಿಸುವುದರಿಂದ ಯೂರಿಕ್ ಆಮ್ಲವನ್ನ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಯೂರಿಕ್ ಆಮ್ಲ ಹೆಚ್ಚಾದಾಗ ಏನು ತಿನ್ನಬಾರದು?
ಯೂರಿಕ್ ಆಮ್ಲದ ಮಟ್ಟ ಹೆಚ್ಚಾದಾಗ ಪ್ಯೂರಿನ್‌ಗಳಲ್ಲಿ ಸಮೃದ್ಧವಾಗಿರುವ ಆಹಾರಗಳು ಯೂರಿಕ್ ಆಮ್ಲದ ಉತ್ಪಾದನೆಯನ್ನ ಹೆಚ್ಚಿಸುವುದರಿಂದ ಅವುಗಳನ್ನ ತಪ್ಪಿಸಬೇಕು. ಕೆಂಪು ಮಾಂಸ ಮತ್ತು ಅಂಗ ಮಾಂಸಗಳಲ್ಲಿ ಪ್ಯೂರಿನ್‌ಗಳು ಬಹಳ ಹೆಚ್ಚು. ಸೀಗಡಿ, ಸಾರ್ಡೀನ್‌ಗಳು ಮತ್ತು ಇತರ ಸಮುದ್ರಾಹಾರಗಳಲ್ಲಿಯೂ ಪ್ಯೂರಿನ್‌ಗಳು ಅಧಿಕವಾಗಿರುತ್ತವೆ. ಸೋಡಾ, ಕೆಲವು ಜ್ಯೂಸ್‌ಗಳು, ಕ್ಯಾಂಡಿ, ಐಸ್ ಕ್ರೀಮ್ ಮತ್ತು ಕೇಕ್‌ಗಳಂತಹ ಫ್ರಕ್ಟೋಸ್ ಅಧಿಕವಾಗಿರುವ ಆಹಾರಗಳು ಯೂರಿಕ್ ಆಮ್ಲದ ಉತ್ಪಾದನೆಯನ್ನ ಹೆಚ್ಚಿಸುತ್ತವೆ.
ಆಲ್ಕೋಹಾಲ್ ವಿಶೇಷವಾಗಿ ಬಿಯರ್, ಯೂರಿಕ್ ಆಮ್ಲದ ಮಟ್ಟವನ್ನ ವೇಗವಾಗಿ ಹೆಚ್ಚಿಸುತ್ತದೆ. ಹೂಕೋಸು, ಶತಾವರಿ, ಬಟಾಣಿ ಮತ್ತು ಅಣಬೆಗಳಂತಹ ಕೆಲವು ತರಕಾರಿಗಳಲ್ಲಿ ಪ್ಯೂರಿನ್‌ಗಳು ಅಧಿಕವಾಗಿರುತ್ತವೆ. ಆದ್ದರಿಂದ ಅವುಗಳನ್ನ ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು. ಕೆಲವು ವರದಿಗಳ ಪ್ರಕಾರ, ರಾತ್ರಿಯಲ್ಲಿ ದ್ವಿದಳ ಧಾನ್ಯಗಳನ್ನ ಸೇವಿಸುವುದರಿಂದ ಯೂರಿಕ್ ಆಮ್ಲ ಮಟ್ಟ ಹೆಚ್ಚಾಗಬಹುದು, ಆದ್ದರಿಂದ ರಾತ್ರಿಯಲ್ಲಿ ಅವುಗಳನ್ನ ಆದಷ್ಟು ತಪ್ಪಿಸಬೇಕು.
(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಆಧರಿಸಿರುತ್ತದೆ. ಇಲ್ಲಿನ ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳವು ಮೊದಲು ನೀವು ಕಡ್ಡಾಯವಾಗಿ ತಜ್ಞರ ಸಲಹೆ ಪಡೆದುಕೊಳ್ಳಬೇಕು. ಸಮರಸ ಸುದ್ದಿ ಇದನ್ನು ದೃಢಪಡಿಸುವುದಿಲ್ಲ.)




