ನವದೆಹಲಿ: ದೇಶ 'ವಿಭಜನೆಯ ಕರಾಳ ನೆನಪಿನ ದಿನ'ವು ಸಾಮರಸ್ಯ ಬಲದ ಮೂಲಕ ದೇಶದ ಏಕತೆಯನ್ನು ಎತ್ತಿ ಹಿಡಿಯಬೇಕಾದ ಜವಾಬ್ದಾರಿಯನ್ನು ನೆನಪಿಸುವ ದಿನವೂ ಆಗಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ವಿಭಜನೆ ಸಂದರ್ಭದಲ್ಲಿ ಕೋಮು ದಳ್ಳುರಿಯಿಂದ ಉಂಟಾದ ಅಪಾರ ಸಾವು- ನೋವು, ಜನರು ತಮ್ಮ ಮೂಲ ಬೇರನ್ನು ತೊರೆದು ಹೋಗುವಾಗ ಅನುಭವಿಸಿದ ಸಂಕಟವನ್ನು ದೇಶವು ಸ್ಮರಿಸುತ್ತದೆ.
'ವಿಭಜನೆಯಿಂದ ಊಹಿಸಲು ಸಾಧ್ಯವಾಗದಷ್ಟು ಹಾನಿ ಆಗಿದ್ದರೂ, ಅದನ್ನು ಮೆಟ್ಟಿನಿಂತು ಬದುಕು ಕಟ್ಟಿಕೊಂಡ ಜನರ 'ಸಹಿಷ್ಣುತೆ'ಯನ್ನು ಗೌರವಿಸುವ ದಿನವೂ ಇದಾಗಿದೆ' ಎಂದು ಪ್ರಧಾನಿ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.




