ಮಂಜೇಶ್ವರ: ತೊಟ್ಟೆತ್ತೋಡಿ ವಾಣೀ ವಿಲಾಸ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಶುಕ್ರವಾರ ಜರಗಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ನಿವೃತ್ತ ಶಾಲಾ ಅಧ್ಯಾಪಿಕೆ ನೀರಜಾಕ್ಷಿ ಟಿ.ಕೆ ಕರಕುಶಲ ವಸ್ತು ನಿರ್ಮಾಣ, ಕಸದಿಂದ ರಸ ಸಹಿತ ವಿವಿಧ ಕರಕುಶಲ ವಸ್ತುಗಳನ್ನು ನಿರ್ಮಿಸುವ ತರಗತಿ ನಡೆಸಿಕೊಟ್ಟರು. ವಿವಿಧ ಮಾದರಿ ನಿರ್ಮಾಣದಲ್ಲಿ ಬಹುಮಾನಗಳಿಸಿದ ಮಕ್ಕಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಮುಖ್ಯೋಪಾಧ್ಯಾಯಿನಿ ರಾಜೇಶ್ವರಿ, ಪಿ.ಟಿ.ಎ. ಅಧ್ಯಕ್ಷ ಗಣೇಶ ಜಪ್ಪ ಹಾಗೂ ಜಯಪ್ರಕಾಶ್ ಕುಳೂರು, ಶಾಲಾ ಅಧ್ಯಾಪಕ ವೃಂದ ಕಾರ್ಯಕ್ರಮದಲ್ಲಿ ಶುಭ ಹಾರೈಸಿದರು.




.jpg)
