ಹೈದರಾಬಾದ್: ಸ್ಕೈರೂಟ್ ಏರೋಸ್ಪೇಸ್ (Skyroot Aerospace) ಸಂಸ್ಥೆ ಯಶಸ್ವಿಯಾಗಿ ತನ್ನ ಶಕ್ತಿಶಾಲಿ ಕಲಾಂ 1200 ರಾಕೆಟ್ ಮೋಟಾರ್ ಪರೀಕ್ಷೆ ಮಾಡಿದೆ.
ಹೌದು.. ಸ್ಕೈರೂಟ್ ಏರೋಸ್ಪೇಸ್ (Skyroot Aerospace) ಸಂಸ್ಥೆಯ ಕನಸಿನ ಯೋಜನೆ ವಿಕ್ರಮ್-೧ ಉಡಾವಣಾ ವಾಹನದ ಮೊದಲ ಹಂತ ಯಶಸ್ವಿಯಾಗಿದ್ದು, ಸಂಸ್ಥೆ ಯಶಸ್ವಿಯಾಗಿ ತನ್ನ ಶಕ್ತಿಶಾಲಿ ಕಲಾಂ 1200 ರಾಕೆಟ್ ಮೋಟಾರ್ ಪರೀಕ್ಷಿಸಿದೆ. ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಇಂದು ಬೆಳಗ್ಗೆ ಯಶಸ್ವಿಯಾಗಿ ಈ ಪರೀಕ್ಷೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಇಸ್ರೋ ಪ್ರಕಾರ, ಕಲಾಂ 1200 ಮೋಟಾರ್ 11 ಮೀಟರ್ ಉದ್ದ, 1.7ಮೀಟರ್ ವ್ಯಾಸದ ಏಕಶಿಲೆಯ ಸಂಯೋಜಿತ ಮೋಟಾರ್ ಆಗಿದ್ದು, ಶ್ರೀಹರಿಕೋಟಾದ ಘನ ಪ್ರೊಪಲ್ಲೆಂಟ್ ಸ್ಥಾವರದಲ್ಲಿ ತಯಾರಾದ ಅತಿ ಉದ್ದದ ಏಕಶಿಲೆಯ ಮೋಟಾರ್ ಆಗಿದೆ ಎಂದು ಹೇಳಲಾಗಿದೆ.
ಪ್ರಯೋಗಕ್ಕಾಗಿ ಬಳಸಲಾಗುವ ವಿಶೇಷ ಪರೀಕ್ಷಾ ನಿಲುವನ್ನು ಸಹ ಇಸ್ರೋ ವಿನ್ಯಾಸಗೊಳಿಸಿದ್ದು ಸಾಧನೆ ಭಾರತ ಸರ್ಕಾರದ ಬಾಹ್ಯಾಕಾಶ ನೀತಿ2023ಕ್ಕೆ ಅನುಗುಣವಾಗಿದೆ ಎಂದು ತಿಳಿಸಿದೆ.
ಭಾರತದ ಬಾಹ್ಯಾಕಾಶ ಆರ್ಥಿಕತೆಯನ್ನು ಹೆಚ್ಚಿಸಲು ಇಸ್ರೋದ ತಾಂತ್ರಿಕ ಮೂಲಸೌಕರ್ಯ ಮತ್ತು ಪರಿಣತಿಯನ್ನು ಬಳಸಲು ಪ್ರೋತ್ಸಾಹಿಸುತ್ತದೆ ಎಂದು ಇಸ್ರೋ ತಿಳಿಸಿದೆ.
ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್ ಪ್ರತಿಕ್ರಿಯಿಸಿ ನಾಸಾ-ಇಸ್ರೋ ಜಂಟಿಯಾಗಿ ನಿರ್ಮಿಸಿದ ಸಿಂಥೆಟಿಕ್ ಅಪರ್ಚರ್ ರಾಡಾರ್ ಉಪಗ್ರಹದ ಯಶಸ್ವಿ ಉಡಾವಣೆಯಯ ಕಾರ್ಯಾಚರಣೆಯನ್ನು ಶ್ಲಾಘಿಸಿದ್ದು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಜಿಎಸ್ ಎಲ್ ವಿ ರಾಕೆಟ್ ಬಳಸಿ “ಇದುವರೆಗಿನ ಅತ್ಯಂತ ನಿಖರವಾದ ಉಡಾವಣೆಗಳಲ್ಲಿ ಒಂದಾಗಿದೆ” ಎಂದು ಹೇಳಿದ್ದಾರೆ.

