ಚಂಡಿಗಢ: ಕೃಷಿ ತ್ಯಾಜ್ಯ ದಹನದ ಕಾರಣಕ್ಕೆ ರೈತರ ವಿರುದ್ಧ ಪಂಜಾಬ್ ಪೊಲೀಸರು ಸೆಪ್ಟಂಬರ್ 18ರಿಂದ 12 ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ.
ಸೆಪ್ಟಂಬರ್ 15ರಂದು ಮೇಲ್ವಿಚಾರಣೆ ಪ್ರಾರಂಭವಾದ ಬಳಿಕ ಕೃಷಿ ತ್ಯಾಜ್ಯ ದಹನದ 48 ಪ್ರಕರಣಗಳು ವರದಿಯಾಗಿವೆ ಎಂದು ಪಂಜಾಬ್ ಮಾಲಿನ್ಯ ನಿಯಂತ್ರಣ ಮಂಡಳಿಯ ದತ್ತಾಂಶ ತಿಳಿಸಿದೆ.
ಇವುಗಳ ಪೈಕಿ 11 ಎಫ್‌ಐಆರ್ ಅಮೃತಸರದಲ್ಲಿ ದಾಖಲಾಗಿದೆ ಎಂದು ತಿಳಿಸಿದೆ.
ರೈತರು ಕೃಷಿ ತ್ಯಾಜ್ಯ ದಹಿಸುವುದನ್ನು ತಡೆಯಲು ಬಂಧನ ಸೇರಿದಂತೆ ಕಠಿಣ ಶಿಕ್ಷೆಯನ್ನು ವಿಧಿಸಬೇಕಾಗಬಹುದು ಎಂದು ಸುಪ್ರೀಂ ಕೋರ್ಟ್ ಸೆಪ್ಟಂಬರ್ 17ರಂದು ಅಭಿಪ್ರಾಯ ವ್ಯಕ್ತಪಡಿಸಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ. ರೈತರು ದೇಶಕ್ಕೆ ಮುಖ್ಯ. ಆದರೆ, ಬೆಳೆ ತ್ಯಾಜ್ಯ ದಹನವನ್ನು ಯಾವುದೇ ನಿಯಂತ್ರಣ ಇಲ್ಲದೆ ಮುಂದುವರಿಸಲು ಅವಕಾಶ ನೀಡುವುದನ್ನು ಅದು ಸಮರ್ಥಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿತ್ತು.
''ನೀವು ಕೆಲವು ದಂಡದ ನಿಯಮಗಳ ಬಗ್ಗೆ ಯೋಚಿಸುವುದಿಲ್ಲ ಯಾಕೆ ? ಕೆಲವರು ಜೈಲು ಸೇರಿದರೆ, ಸರಿಯಾದ ಸಂದೇಶ ರವಾನೆಯಾಗುತ್ತದೆ'' ಎಂದು ನ್ಯಾಯಾಲಯ ಪಂಜಾಬ್ ಸರಕಾರಕ್ಕೆ ತಿಳಿಸಿತ್ತು.




