HEALTH TIPS

ಉತ್ತರಾಖಂಡ ಮೇಘಸ್ಫೋಟ: ಸಾವಿನ ಸಂಖ್ಯೆ 21ಕ್ಕೆ ಏರಿಕೆ, 14 ಮಂದಿ ನಾಪತ್ತೆ

ಲಖನೌ: ಉತ್ತರಾಖಂಡಲ್ಲಿ ಸಂಭವಿಸಿದ ಮೇಘಸ್ಫೋಟ ಮತ್ತು ಭಾರಿ ಮಳೆಯಿಂದಾಗಿ ಮೃತಪಟ್ಟವರ ಸಂಖ್ಯೆ ಬುಧವಾರ 21ಕ್ಕೆ ಏರಿಕೆಯಾಗಿದೆ. 14 ಮಂದಿ ನಾಪತ್ತೆಯಾಗಿದ್ದಾರೆ.

ರಾಯಪುರದ ಸಂಗ್‌ ನದಿಯಲ್ಲಿ ಎರಡು ಮೃತದೇಹ ಮತ್ತು ಅಸನ್ ನದಿಯಲ್ಲಿ ಒಂದು ಮೃತದೇಹ ಪತ್ತೆಯಾಗಿದೆ ಎಂದು ವರದಿಗಳು ತಿಳಿಸಿವೆ.

ಸಹಸ್ತ್ರಧಾರ ಬಳಿಯ ಫುಲೆಟ್‌ ಗ್ರಾಮದಲ್ಲಿ ಆರು ಮಂದಿ ಅವಶೇಷಗಳಡಿ ಸಿಲುಕಿದ್ದಾರೆ. ಪ್ರವಾಹ ಪೀಡಿತ ಗ್ರಾಮಗಳಾದ ಮಜಡಾ, ಚಹಮ್‌ಸರಿ ಮತ್ತು ಜಮಡಾದಲ್ಲಿನ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಹಲವಾರು ಕಡೆ ಭೂಕುಸಿತ ಸಂಭವಿಸಿ, ರಸ್ತೆಗಳಿಗೆ ಅಪಾರ ಹಾನಿಯಾಗಿರುವುದರಿಂದ ಡೆಹ್ರಾಡೂನ್‌ನಿಂದ ಪ್ರಸಿದ್ಧ ಪ್ರವಾಸಿತಾಣಗಳಾದ ಮುಸ್ಸೋರಿ ಮತ್ತು ಸಹಸ್ತ್ರಧಾರಕ್ಕೆ ಬುಧವಾರವೂ ವಾಹನ ಸಂಚಾರ ಸ್ಥಗಿತಗೊಂಡಿದೆ.

ಬದರೀನಾಥ ಹೆದ್ದಾರಿಯಲ್ಲಿ ವಾಹನವೊಂದು ಮಗುಚಿಬಿದ್ದ ಪರಿಣಾಮ ಏಳು ಮಂದಿಗೆ ಗಾಯಗಳಾಗಿದ್ದು, ಒಬ್ಬರು ನಾಪತ್ತೆಯಾಗಿದ್ದಾರೆ.

ಮಂಗಳವಾರ ಮುಂಜಾನೆ ಸಂಭವಿಸಿದ ಮೇಘಸ್ಫೋಟ ಮತ್ತು ಮಳೆಯಿಂದಾಗಿ ಡೆಹ್ರಾಡೂನ್‌ ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ ಭಾರಿ ಹಾನಿಯಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries