ಕುಂಬಳೆ : ಇಲ್ಲಿನ ಚಿರಂಜೀವಿ ಕ್ಲಬ್ ನೇತೃತ್ವದಲ್ಲಿ ಸೆ. 21 ಭಾನುವಾರ ಚಿರಂಜೀವಿ ಕಾರ್ಯಾಲಯ ಸಮೀಪ ರಕ್ತದಾನ ಶಿಬಿರ ಮತ್ತು ಉಚಿತ ರೋಗ ತಪಾಸಣಾ ಶಿಬಿರ ನಡೆಯಲಿದೆ.
ಕಾಸರಗೋಡು ಜನರಲ್ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಪ್ರತಿನಿಧಿ ಡಾ. ಸೌಮ್ಯ ಅವರ ಸಹಕಾರದಿಂದ ರಕ್ತದಾನ ಶಿಬಿರ ಮತ್ತು ಕುಂಬಳೆ ಡಾಕ್ಟರ್ಸ್ ಹಾಸ್ಪಿಟಲ್ ನ ಡಾ. ಸಾದತ್ ಹುಸೈನ್ ಸಹಕಾರದಿಂದ ಉಚಿತ ರೋಗ ತಪಾಸಣಾ ಶಿಬಿರ ಜರಗಲಿದೆ.
ಬೆಳಿಗ್ಗೆ 9 ರಿಂದ ಮಧ್ಯಾಹ್ನ 1ರ ತನಕ ಜರಗಲಿರುವ ಶಿಬಿರವನ್ನು ಬೆಳಿಗ್ಗೆ 9ಕ್ಕೆ ಗ್ರಾ. ಪಂ. ಅಧ್ಯಕ್ಷೆ ತಾಹಿರಾ ಯೂಸುಫ್ ಉದ್ಘಾಟಿಸುವರು.
ಜನಮೈತ್ರಿ ಪೋಲೀಸ್ ಕುಂಬಳೆ ಮತ್ತು ಶಾಂತಿಪಳ್ಳ ಫ್ರೆಂಡ್ ಶಿಪ್ ಬಾಯ್ಸ್, ಭಾಸ್ಕರ್ ನಗರದ ನವೋದಯ ಫ್ರೆಂಡ್ಸ್ ಕ್ಲಬ್, ಕೋಟೆಕಾರಿನ ಭಾರ್ಗವ ಫ್ರೆಂಡ್ಸ್ ಕ್ಲಬ್ ಮೊದಲಾದುವುಗಳ ಸಂಯುಕ್ತ ಸಹಕಾರದಲ್ಲಿ ಚಿರಂಜೀವಿ (ರಿ) ಕ್ಲಬ್ ಶಿಬಿರ ಆಯೋಜಿಸಿದೆ.
ಶಿಬಿರದಂಗವಾಗಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕುಂಬಳೆ ಠಾಣಾಧಿಕಾರಿ ಜಿಜಿನ್, ಗ್ರಾ. ಪಂ. ಸದಸ್ಯರಾದ ಪ್ರೇಮಾವತಿ ಶೆಟ್ಟಿ, ಅನಿಲ್ ಕುಮಾರ್ ಎಸ್, ಕುಂಬಳೆ ಸೈಂಟ್ ಮೋನಿಕಾ ಇಗರ್ಜಿಯ ಧರ್ಮಗುರು ಫಾ. ಮೆಲ್ವಿನ್ ಡಿಸೋಜ, ಕಾಸರಗೋಡು ಐ.ಎಂ.ಎ. ಘಟಕದ ಅಧ್ಯಕ್ಷ ಡಾ. ಹರಿಕಿರಣ್ ಬಂಗೇರ, ಕುಂಬಳೆ ಸಹಕಾರಿ ಆಸ್ಪತ್ರೆ ವೈದ್ಯ ಡಾ. ಮೊಹಮ್ಮದ್ ಶೆರೀಫ್, ಕಾಸರಗೋಡು ಜನರಲ್ ಆಸ್ಪತ್ರೆಯ ಡಾ. ಸೌಮ್ಯ, ಕುಂಬಳೆ ಡಾಕ್ಟರ್ಸ್ ಆಸ್ಪತ್ರೆಯ ಡಾ. ಸಾದತ್ ಹುಸೈನ್, ಮಂಗಳೂರು ಏನಪೆÇೀಯ ಮೆಡಿಕಲ್ ಕಾಲೇಜಿನ ಪೋರೆನ್ಸಿಕ್ ವಿಭಾಗ ಮುಖ್ಯಸ್ಥ ಡಾ. ಕೀಶೋರ್ ಕುಮಾರ್ ಬದಿಯಡ್ಕ, ಕುಂಬಳೆ ಜನಮೈತ್ರಿ ಪೋಲೀಸ್ ನ ವಸಂತ ಕೆ, ಉದ್ಯಮಿ ನಾರಾಯಣ ಪ್ರಭು ಕುಂಬಳೆ, ಕುಂಬಳೆ ಸಹಕಾರಿ ಆಸ್ಪತ್ರೆ ಅಧ್ಯಕ್ಷ ರಘುದೇವನ್ ಮಾಸ್ತರ್, ಕುಂಬಳೆ ಜಿಯುಪಿ ಶಾಲಾ ಮುಖ್ಯೋಪಾಧ್ಯಾಯ ವಿಜಯ ಕುಮಾರ್ ಪಾವಳ, ಸಮಾಜ ಸೇವಕ ಮೊಯ್ದು ಸೀತಾಂಗೋಳಿ, ವಿವಿಧ ಕ್ಲಬ್ ಅಧ್ಯಕ್ಷರುಗಳಾದ ರಾಜೇಶ್, ನವೀನ್ ಕುಮಾರ್, ಗುರುರಾಜ್ ಮೊದಲಾದವರು ಅತಿಥಿಗಳಾಗಿ ಪಾಲ್ಗೊಳ್ಳುವರು. ಚಿರಂಜೀವಿ ಅಧ್ಯಕ್ಷ ಕೃಷ್ಣ ಗಟ್ಟಿ ಕುಂಬಳೆ ಅಧ್ಯಕ್ಷತೆ ವಹಿಸುವರು.
ರಕ್ತದಾನ ಮಹಾದಾನವಾಗಿದ್ದು ಆರೋಗ್ಯವಂತ ನಾಗರಿಕರು ರಕ್ತದಾನದಲ್ಲಿ ತೊಡಗಿ ಪರಜೀವ ರಕ್ಷಣೆಯೊಂದಿಗೆ ತಮ್ಮ ಶಾರೀರಿಕ ಸುಧಾರಣೆಗೆ ಕಾಳಜಿ ವಹಿಸಬೇಕೆಂಬ ಕರೆಯೊಂದಿಗೆ ವರ್ಷಂಪ್ರತಿ ರಕ್ತದಾನ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ. ನಾಗರಿಕರು ಉಚಿತ ತಪಾಸಣೆಯೊಂದಿಗೆ ರಕ್ತದಾನ ಮಾಡುವಂತೆ ಕ್ಲಬ್ ಪ್ರಕಟಣೆ ವಿನಂತಿಸಿದೆ.





