ಕೊಚ್ಚಿ: ಎಂ.ಎಸ್.ಸಿ. ಎಲ್ಸಾ-3 ಹಡಗು ಮುಳುಗಿದ ಘಟನೆಯಲ್ಲಿ ಹೈಕೋರ್ಟ್‍ನಲ್ಲಿ 1200 ಕೋಟಿ ರೂ. ಠೇವಣಿ ಇಡಲು ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ. ಹೈಕೋರ್ಟ್ ಏಕ ಪೀಠದಿಂದ ಈ ಆದೇಶ ಬಂದಿದೆ. ಹಣವನ್ನು ಠೇವಣಿ ಇಟ್ಟ ನಂತರವೇ, ಘಟನೆಗೆ ಸಂಬಂಧಿಸಿದಂತೆ ವಶಕ್ಕೆ ಪಡೆದ ಹಡಗನ್ನು ಬಿಡುಗಡೆ ಮಾಡಲಾಗುತ್ತದೆ. ಅಪಘಾತಕ್ಕೆ ಒಳಗಾದ ಹಡಗಿನಲ್ಲಿದ್ದ 399 ಕಂಟೇನರ್‍ಗಳು ಕಳೆದುಹೋಗಿವೆ. ನ್ಯಾಯಾಲಯದ ಈ ನಿರ್ಣಾಯಕ ಆದೇಶವು ಈ ಕಂಟೇನರ್‍ಗಳನ್ನು ಹೊಂದಿರುವ ವಿವಿಧ ಕಂಪನಿಗಳು ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಿದ ನಂತರ ಪರಿಹಾರವನ್ನು ಒದಗಿಸುವುದಕ್ಕೆ ಸಂಬಂಧಿಸಿದೆ.
ಎಂ.ಎಸ್.ಸಿ. ಎಲ್ಸಾ-3 ಹಡಗು ಅಪಘಡಕ್ಕೆ ಸಂಬಂಧಿಸಿದಂತೆ ಹಡಗು ಕಂಪನಿಯ ವಿರುದ್ಧ ಸಲ್ಲಿಸಲಾದ ಅರ್ಜಿಯಲ್ಲಿ ಸರ್ಕಾರ 9,531 ಕೋಟಿ ರೂ. ಪರಿಹಾರವನ್ನು ಕೋರಿದೆ. ಪರಿಸರ ಮಾಲಿನ್ಯ, ತೈಲ ಸೋರಿಕೆ, ಮೀನುಗಾರರ ಜೀವನೋಪಾಯ ನಷ್ಟ ಮತ್ತು ಅಪಘಾತದ ನಂತರ ಕಂಟೇನರ್‍ಗಳಿಂದ ತ್ಯಾಜ್ಯವನ್ನು ತೆಗೆದುಹಾಕುವ ವೆಚ್ಚವನ್ನು ಉಲ್ಲೇಖಿಸಿ ಸರ್ಕಾರ ಇಷ್ಟು ದೊಡ್ಡ ಮೊತ್ತವನ್ನು ಕೋರಿತ್ತು.
ಮೇ 24 ರಂದು ಕೊಚ್ಚಿ ಕರಾವಳಿಯಿಂದ 38 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಹಡಗು ಮುಳುಗಿತು. ತಮಿಳುನಾಡಿನ ತೂತುಕುಡಿ, ವಿಳಿಂಜಮ್, ಕೊಚ್ಚಿ ಮತ್ತು ಮಂಗಳೂರು ಬಂದರುಗಳ ನಡುವೆ ಕಾರ್ಯನಿರ್ವಹಿಸುತ್ತಿದ್ದ ಎಂ.ಎಸ್.ಸಿ. ಎಲ್ಸಾ-3, 643 ಕಂಟೇನರ್‍ಗಳನ್ನು ಸಾಗಿಸುತ್ತಿತ್ತು.




