ಕೊಚ್ಚಿ: ಮಟ್ಟಂಚೇರಿಯ 59 ವರ್ಷದ ಮಹಿಳೆಯನ್ನು ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿಸಿ ವರ್ಚುವಲ್ ಬಂಧನದಲ್ಲಿರಿಸುವ ಬೆದರಿಕೆ ಹಾಕಿ 2.88 ಕೋಟಿ ರೂ.ಗಳಿಗೂ ಹೆಚ್ಚು ದೋಚಿರುವುದು ಬೆಳಕಿಗೆ ಬಂದಿದೆ.
ಜೆಟ್ ಏರ್‍ವೇಸ್‍ನ ಮಾಜಿ ಸಿಇಒ ನರೇಶ್ ಗೋಯಲ್ ಅವರ ಆರ್ಥಿಕ ದುರುಪಯೋಗದಲ್ಲಿ ಮಹಿಳೆ ಭಾಗಿಯಾಗಿದ್ದಾರೆ ಎಂದು ವಂಚಕರು ಆರೋಪ ಮಾಡಿ ಈ ವಂಚನೆ ನಡೆಸಲಾಗಿದೆ. ಸುಪ್ರೀಂ ಕೋರ್ಟ್ ಮತ್ತು ಸಿಬಿಐನ ಲಾಂಛನಗಳಿರುವ ಕೆಲವು ದಾಖಲೆಗಳನ್ನು ಅವರು ತೋರಿಸಿದರು. ದಂಡವನ್ನು ಪಾವತಿಸುವ ಮೂಲಕ ವಿಚಾರಣೆಯಿಂದ ತಪ್ಪಿಸಿಕೊಳ್ಳಬಹುದು ಎಂದು ಅವರು ನಂಬಿಸಿದರು.
ನಂತರ, ಅವರ ಬಳಿ ಇದ್ದ ಎಲ್ಲಾ ಹಣವನ್ನು ಖಾತೆ ವರ್ಗಾವಣೆಯ ಮೂಲಕ ತೆಗೆದುಕೊಳ್ಳಲಾಗಿದೆ. ಅವರು ಮೋಸ ಹೋಗಿದ್ದಾರೆಂದು ಅರಿವಾಗುವ ಹೊತ್ತಿಗೆ ತುಂಬಾ ತಡವಾಗಿತ್ತು. ದೂರಿನ ನಂತರ, ಮಟ್ಟಂಚೇರಿ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.




