HEALTH TIPS

ಬ್ರೆಜಿಲ್‌, ಕೊಲಂಬಿಯಾ ಸೇರಿ ದಕ್ಷಿಣ ಅಮೆರಿಕದ 4 ದೇಶಗಳಿಗೆ ರಾಹುಲ್ ಭೇಟಿ

ನವದೆಹಲಿ: 'ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಬ್ರೆಜಿಲ್‌, ಕೊಲಂಬಿಯಾ ಸೇರಿ ದಕ್ಷಿಣ ಅಮೆರಿಕದ ನಾಲ್ಕು ದೇಶಗಳಿಗೆ ಭೇಟಿ ನೀಡಲು ತೆರಳಿದರು' ಎಂದು ಕಾಂಗ್ರೆಸ್‌ ಶನಿವಾರ ಹೇಳಿದೆ. ಆದರೆ, ರಾಹುಲ್‌ ಅವರು ಎಷ್ಟು ದಿನಗಳವರೆಗೆ ಈ ದೇಶಗಳಲ್ಲಿ ಇರಲಿದ್ದಾರೆ ಎಂಬ ಮಾಹಿತಿ ಹಂಚಿಕೊಂಡಿಲ್ಲ.

ಈ ಬಗ್ಗೆ ಪಕ್ಷದ ಮಾಧ್ಯಮ ಮತ್ತು ಪ್ರಸಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ 'ಎಕ್ಸ್‌'ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

'ಬ್ರೆಜಿಲ್‌ ಮತ್ತು ಕೊಲಂಬಿಯಾದಲ್ಲಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳೊಂದಿಗೆ ರಾಹುಲ್‌ ಮಾತುಕತೆ ನಡೆಸಲಿದ್ದಾರೆ. ಜೊತೆಗೆ, ನಾಲ್ಕು ದೇಶಗಳಲ್ಲಿ ಆಯಾ ದೇಶಗಳ ರಾಜಕೀಯ ನಾಯಕರೊಂದಿಗೂ ಚರ್ಚೆ ನಡೆಸಲಿದ್ದಾರೆ. ಈ ಮೂಲಕ ಭಾರತದೊಂದಿಗಿನ ಆಯಾ ದೇಶಗಳ ಪ್ರಜಾಪ್ರಭುತ್ವ ಮತ್ತು ರಾಜತಾಂತ್ರಿಕ ಸಂಬಂಧವನ್ನು ಗಟ್ಟಿಗೊಳಿಸಲಿದ್ದಾರೆ' ಎಂದು ಖೇರಾ ಹೇಳಿದ್ದಾರೆ.

'ಅಮೆರಿಕವು ಭಾರತದ ಮೇಲೆ ಸುಂಕ ಹೇರಿದ ಕಾರಣದಿಂದ ದೇಶವು ತನ್ನ ವ್ಯಾಪಾರ ಸಂಬಂಧಕ್ಕಾಗಿ ಇತರ ದೇಶಗಳ ಹುಡುಕಾಟದಲ್ಲಿ ಇರುವ ಈ ಹೊತ್ತಿನಲ್ಲಿ ರಾಹುಲ್‌ ಅವರು ದಕ್ಷಿಣ ಅಮೆರಿಕದ ಈ ನಾಲ್ಕು ದೇಶಗಳ ಉದ್ಯಮಿಗಳೊಂದಿಗೆ ಮಾತನಾಡಲಿದ್ದಾರೆ' ಎಂದೂ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries