ನಿವೃತ್ತ ಪ್ರಾಧ್ಯಾಪಕ ಪ್ರೊ.ಎ.ಶ್ರೀನಾಥ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ರೂಪುರೇಖೆ ನೀಡಿದರು.
ಸಮಾರಂಭ ಅಕ್ಟೋಬರ್ 11 ರಂದು ಕೇರಳ ತುಳು ಅಕಾಡೆಮಿ ಸಹಯೋಗದಲ್ಲಿ ತುಳು ಅಕಾಡೆಮಿ ಸಭಾಂಗಣದಲ್ಲಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1ರ ತನಕ ಆಯೋಜಿಸಲು ತೀರ್ಮಾನಿಸಲಾಗಿದೆ. ಕಾಸರಗೋಡು ಸಂಸದರು, ಶಾಸಕರು, ಸಾಮಾಜಿಕ, ಸಾಹಿತ್ಯ ವಲಯದ ಭಾಗವಹಿಸುವಿಕೆಯೊಂದಿಗೆ ಸಮಾರಂಭ ಯಶಸ್ವಿಗೊಳಿಸಲು ಈ ಸಂದರ್ಭ ನಿರ್ಧಋಇಸಲಾಯಿತು. ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಉದ್ಘಾಟಿಸುವರು. ಈ ವೇಳೆ ಪುವೆಂಪು ಸಂಸ್ಮರಣಾ ಪ್ರಶಸ್ತಿ-2025 ನ್ನು ಹಿರಿಯ ಸಂಶೋಧಕ,ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ನಿವೃತ್ತ ಪ್ರಾಧ್ಯಾಪಕ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಬೆಂಗಳೂರು ಅವರಿಗೆ ಪ್ರದಾನ ಮಾಡಲಾಗುವುದು. ನಿವೃತ್ತ ಪ್ರಾಧ್ಯಾಪಕಿ ಡಾ.ಮೀನಾಕ್ಷಿ ರಾಮಚಂದ್ರ ಅವರು ಪುವೆಂಪು ಸಂಸ್ಮರಣಾ ಭಾಷಣ ಮಾಡಲಿರುವರು. ವಿವಿಧ ವಲಯಗಳ ಗಣ್ಯರು ಭಾಗವಹಿಸುವರು. ಬಳಿಕ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ.
ಸಮಾಲೋಚನಾ ಸಭೆಯಲ್ಲಿ ಕಾರ್ಯಕ್ರಮದ ಯಶಸ್ವಿಗೆ ಸ್ವಾಗತ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಪ್ರೊ.ಎ.ಶ್ರೀನಾಥ್, ಉಪಾಧ್ಯಕ್ಷರಾಗಿ ಪುರುಷೋತ್ತಮ ಪೆರ್ಲ, ಪುರುಷೋತ್ತಮ ಭಟ್.ಕೆ., ಪ್ರಧಾನ ಸಂಚಾಲಕರಾಗಿ ವಿಜಯರಾಜ್ ಪುಣಿಚಿತ್ತಾಯ ಪುಂಡೂರು, ಸಂಚಾಲಕರಾಗಿ ರವಿ ನಾಯ್ಕಾಪು, ಸಂಯೋಜಕರಾಗಿ ವಕೀಲ ಥೋಮಸ್ ಡಿಸೋಜ, ಕೋಶಾಧಿಕಾರಿಯಾಗಿ ಗಂಗಾಧರ ಯಾದವ್ ತೆಕ್ಕೇಮೂಲೆ, ಸದಸ್ಯರಾಗಿ ಅಖಿಲೇಶ್ ನಗುಮುಗಂ, ದೀಪಕ್ ರಾಜ್ ಉಪ್ಪಳ, ಪುರುಷೋತ್ತಮ ಪುಣಿಚಿತ್ತಾಯ, ಪ್ರದೀಪ್ ಮಾಸ್ತರ್, ಅಶ್ವಥ್ ಪೂಜಾರಿ ಲಾಲ್ ಭಾಗ್, ಮಹೇಶ್ ಪುಣಿಯೂರು ಅವರನ್ನು ಆಯ್ಕೆಮಾಡಲಾಯಿತು.
ಸಭೆಯಲ್ಲಿ ವಕೀಲ ಥೋಮಸ್ ಡಿಸೋಜಾ, ವಿಜಯರಾಜ್ ಪುಣಿಚಿತ್ತಾಯ ಮೊದಲಾದವರು ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು. ಪತ್ರಕರ್ತ ರವಿ ನಾಯ್ಕಾಪು ಸ್ವಾಗತಿಸಿ, ವಂದಿಸಿದರು.

.jpg)
.jpg)
