HEALTH TIPS

AI 3D Figurines: ನಿಮ್ಮ ಫೋಟೋವನ್ನು ಉಚಿತವಾಗಿ AI 3D ಪ್ರತಿಮೆಯನ್ನಾಗಿ ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಸ್ಟೆಪ್!

 ಪ್ರಸ್ತುತ ಇಂಟರ್ನೆಟ್ ದುನಿಯಾದಲ್ಲಿ ಹೆಚ್ಚಾಗಿ ವೈರಲ್ ಆಗುತ್ತಿರುವ ಈ ಹೊಸ AI 3D Figurines ಫೋಟೋಗಳ ಬಗ್ಗೆ ನೀವು ಸೋಶಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ಕಡೆ ನೋಡುತ್ತಿರಬಹುದು. ಈ ಹೊಸ ಮಾದರಿಯ 3D ಇಮೇಜ್ ಪ್ರತಿಮೆಗಳು ಸಿಕ್ಕಾಪಟ್ಟೆ ಟ್ರೆಂಡ್ ಆಗುವುದರೊಂದಿಗೆ ಸುಂದರ ಮತ್ತು ಆಕರ್ಷಕವಾಗಿ ಕಾಣುತ್ತವೆ. ಹಾಗಾದ್ರೆ ಈ ನಿಮಗೂ ತಮ್ಮದೆಯಾದ ಉಚಿತ ಮಿನಿ 3D ಕಲೆಕ್ಟಿಬಲ್ ಫೋಟೋಗಳನ್ನು ಕೆಲವೇ ನಿಮಿಷಗಳಲ್ಲಿ ಹೇಗೆ ರಚಿಸಬಹುದು ಮತ್ತು ಪ್ರಾರಂಭಿಸಲು ಬೇಕಾಗುವ ಪ್ರಾಂಪ್ಟ್ ಹೇಗೆ ಎಂಬುದನ್ನು ಈ ಕೆಳಗೆ ಹಂತ ಹಂತವಾಗಿ ತಿಳಿಯಬಹುದು. ಅಲ್ಲದೆ ನೀವು ಈ ಇಮೇಜ್ಗಳನ್ನು ಡೌನ್ಲೋಡ್ ಮಾಡಿ ನಿಮ್ಮ ಪ್ರೀತಿ ಪಾತ್ರರಿಗೆ ಈ ರೀತಿಯ ಇಮೇಜ್ ರಚಿಸಿ WhatsApp, Insta ಮತ್ತು Facebook ಮೂಲಕ ಹಂಚಿಕೊಳ್ಳಬಹುದು.  


AI 3D Figurines: ಗೂಗಲ್‌ನಲ್ಲಿ ನ್ಯಾನೋ ಬನಾನಾ ಯಾಕೆ ಟ್ರೆಂಡ್ ಆಗಿದೆ?

ಮೊದಲಿಗೆ ಈ ನ್ಯಾನೋ ಬನಾನಾ ಕ್ರೇಜ್ ಜನಪ್ರಿಯವಾದುದು ಏಕೆಂದರೆ ಇದು ಶ್ರಮವಿಲ್ಲದೆ ಮತ್ತು ಕೆಲವೇ ಕ್ಷಣಗಳಲ್ಲಿ ಜಬರ್ದಸ್ತ್ ಫಲಿತಾಂಶವನ್ನು ನಿಮ್ಮ ಮುಂದೆ ಇಡುತ್ತದೆ. Google Gemini 2.5 Flash ಬಳಸಿಕೊಂಡು ಉಚಿತವಾಗಿ ಯಾರದೇ ಫೋಟೋ ಬಳಸಿಕೊಂಡು ಸ್ಟುಡಿಯೋ ಗುಣಮಟ್ಟದ ಹೈಪರ್-ರಿಯಲ್ 3D ಫಿಗರ್ ಇಮೇಜ್‌ಗಳನ್ನು ಸೆಕೆಂಡುಗಳಲ್ಲಿ ರಚಿಸಲು ಅನುಮತಿಸುತ್ತದೆ. ಆದ್ದರಿಂದ ಸಾಧಾರಣ ಬಳಕೆದಾರರು ಕೂಡಾ ಯಾವುದೇ ಶ್ರಮವಿಲ್ಲದೆ ಅದ್ದೂರಿಯ AI 3D Figurines ಫಲಿತಾಂಶಗಳನ್ನು ಪಡೆಯಬಹುದು.

Google Gemini ಬಳಸಿ ಆಕ್ಷನ್ ಫಿಗರ್ಡ್ ಥೀಮ್ ರಚಿಸುವುದು ಹೇಗೆ?

  • ಮೊದಲಿಗೆ ನೀವು Google Gemini ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ತೆರೆಯಿರಿ
  • ಇಲ್ಲಿ ಟೈಪ್ ಮಾಡುವಲ್ಲಿ ಮೊದಲು ನಿಮಗೆ ಬೇಕಾದ ಫೋಟೋವನ್ನು ಇಲ್ಲಿ ಅಪ್‌ಲೋಡ್ ಮಾಡಿ ಕೆಳಗೆ ನೀಡಿರುವ ಪ್ರಾಂಪ್ಟ್‌ ನೀಡಿ ಸಾಕು.
  • ಪ್ರಸ್ತುತ Google Gemini ಬಳಸಿ ಪ್ರತ್ಯೇಕ ಪ್ರಾಂಪ್ಟ್‌ಗಳೊಂದಿಗೆ ಆಕ್ಷನ್ ಫಿಗರ್ ಥೀಮ್ ಚಿತ್ರಗಳನ್ನು ರಚಿಸಲು ಪ್ರಯತ್ನಿಸಿದ್ದೇವೆ.
  • ನಿಮ್ಮ ಬಳಕೆಯ ಸಂದರ್ಭಕ್ಕೆ ಯಾವ ಚಿತ್ರ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೀವು ನಿರ್ಧರಿಸಬಹುದು ಮತ್ತು ಅದಕ್ಕೆ ಅನುಗುಣವಾಗಿ ಈ ಪ್ರಾಂಪ್ಟ್‌ಗಳನ್ನು ಮಾರ್ಪಡಿಸಬಹುದು.
  • ಈ ಪ್ರಾಂಪ್ಟ್‌ ನೀಡಿ Create a 1/7 scale commercialized figurine of the characters in the picture, in a realistic style, in a real environment. The figurine is placed on a computer desk. The figurine has a round transparent acrylic base, with no text on the base. The content on the computer screen is the ZBrush modeling process of this figurine. Next to the computer screen is a BANDAI-style toy packaging box printed with the original artwork. The packaging features two-dimensional flat illustrations.
  • ಈಗ ನಿಮಗೆ ಇಲ್ಲಿ ಆಕ್ಷನ್ ಫಿಗರ್ ಇಮೇಜ್ ಬರುತ್ತದೆ ಇದರ ಕ್ವಾಲಿಟಿ ಅಷ್ಟು ಚೆನ್ನಾಗಿಲ್ಲದಿದ್ದರೆ ಇದರ ಕೆಳಗೆ ಇಮೇಜ್ ಕ್ವಾಲಿಟಿಯನ್ನು ಹೆಚ್ಚಿಸುವಂತೆ ಟೈಪ್ ಮಾಡಿ ಇನ್ನೂ ಉತ್ತಮವಾಗಿ ಪಡೆಯಬಹುದು.
  • ಇನ್ನೂ ನಿಮಗೆ ಸಮಾಧಾನವಾಗದಿದ್ದರೆ ಈ ಇಮೇಜ್ ಅನ್ನು ಡೌನ್ಲೋಡ್ ಮಾಡಿಕೊಂಡು ಆನ್‌ಲೈನ್‌ನಲ್ಲಿ ಲಭ್ಯವಿರುವ ಯಾವುದಾದರೂ Photo Enhancer ಸೈಟ್ ಬಳಸಿಕೊಂಡು ನಿಮ್ಮ ಫೋಟೋವಿನ ಕ್ವಾಲಿಟಿಯನ್ನು ಮತ್ತಷ್ಟು ಉತ್ತಮಗೊಳಿಸಬಹುದು. 










Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries