HEALTH TIPS

Asia Cup 2025: ಪಾಕ್ ಸಚಿವನಿಂದ ಟ್ರೋಫ್ ಸ್ವೀಕರಿಸಲು ಭಾರತ ನಕಾರ; ತಡರಾತ್ರಿ ದುಬೈನಲ್ಲಿ ಹೈಡ್ರಾಮಾ, ಕ್ರಿಕೆಟ್ ಇತಿಹಾಸದಲ್ಲೇ ಕಂಡು ಕೇಳರಿಯದ ಘಟನೆ..!

ದುಬೈ: ಏಷ್ಯಾಕಪ್ ಫೈನಲ್ ಪಂದ್ಯ ರೋಚಕ ರೀತಿಯಲ್ಲಿ ಮುಕ್ತಾಯಗೊಂಡ ಬಳಿಕ ಪ್ರಶಸ್ತಿ ವಿತರಣಾ ಸಮಾರಂಭದಲ್ಸಿ ಭಾರೀ ಹೈಡ್ರಾಮಾ ನಡೆದಿದೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ, ಪಾಕ್‌ನ ಆಂತರಿಕ ವ್ಯವಹಾರಗಳ ಸಚಿವರೂ ಆಗಿರುವ ಏಷ್ಯಾ ಕ್ರಿಕೆಟ್ ಮಂಡಳಿ (ಎಸಿಸಿ) ಅಧ್ಯಕ್ಷ ಮೊಹಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ಭಾರತ ನಿರಾಕರಿಸಿದೆ.

ಮೊಹ್ಸಿನ್ ನಖ್ವಿ ಹಾಗೂ ಇನ್ನಿತರ ಗಣ್ಯರು ವೇದಿಕೆ ಮೇಲೆ ಬಂದು ಕಾಯುತ್ತಾ ನಿಂತಿದ್ದರು. ಆದರೆ. ಭಾರತೀಯ ಆಟಗಾರರು ವೇದಿಕೆಯಿಂದ 15-20 ಅಡಿ ದೂರದಲ್ಲಿ ನಿಂತು ಪ್ರತಿರೋಧ ವ್ಯಕ್ತಪಡಿಸಿದರು.

ಇನ್ನು ಪಾಕಿಸ್ತಾನಿ ಆಟಗಾರರು ಡ್ರೆಸ್ಸಿಂಗ್ ಕೋಣೆ ಬಿಟ್ಟು ಹೊರಗೇ ಬರಲಿಲ್ಲ. ಒಂದು ಹಂತದಲ್ಲಿ ಟ್ರೋಫಿಯನ್ನು ಮೈದಾನದಿಂದ ಹೊರಕ್ಕೆ ಕೊಂಡೊಯ್ಯಲಾಯಿತು. ಪ್ರಶಸ್ತಿ ವಿತರಣಾ ಸಮಾರಂಭ ನಡೆಯತ್ತೋ ಇಲ್ಲವೋ ಎನ್ನುವ ಬಗ್ಗೆ ಯಾರಿಗೂ ಸ್ಪಷ್ಟತೆ ಇರಲಿಲ್ಲ.

ಕೊನೆಗೆ ಪಂದ್ಯದ ಮುಗಿದ 55 ನಿಮಿಷಗಳ ಬಳಿಕ ಪ್ರಶಸ್ತಿ ವಿತರಣಾ ಸಮಾರಂಭ ಆರಂಭಗೊಂಡಿತು. ವೇದಿಕೆ ಮೇಲೆ ಮೊಹ್ಸಿನ್ ನಖ್ವಿ ಸೇರಿ ಹಲವು ಗಣ್ಯರು ಇದ್ದರು. ಆದರೆ, ಭಾರತ ಪಂದ್ಯ ಶ್ರೇಷ್ಠ, ಸರಣಿ ಶ್ರೇಷ್ಠ ಪ್ರಶಸ್ತಿಗಳನ್ನು ಇನ್ನಿತರ ಗಣ್ಯರಿಂದ ಸ್ವೀಕರಿಸಿತು. ಆದರೆ, ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಪಡೆಯಲಿಲ್ಲ.

ಭಾರತ ತಂಡ ಪ್ರಶಸ್ತಿ ಸ್ವೀಕರಿಸುವುದಿಲ್ಲ ಎಂದು ಎಸಿಸಿ ಮಾಹಿತಿ ನೀಡಿದೆ ಎಂದು ತಿಳಿಸಿ ನಿರೂಪಕ ಸೈಮನ್ ಡೂಲ್ ಪ್ರಶಸ್ತಿ ವಿತರಣಾ ಸಮಾರಂಭವನ್ನು ಕೊನೆಗೊಳಿಸಿದರು.

ಈ ನಡುವೆ ರನ್ನರ್-ಅಪ್ ಬಹುಮಾನ ಪಡೆಯಲು ಪಾಕ್ ಆಟಗಾರರನ್ನು ವೇದಿಕೆ ಮೇಲೆ ಕರೆಯಲಾಯಿತು. ಒಲ್ಲದ ಮನಸಿನಿಂದಲೇ ಪಾಕ್ ಆಟಗಾರರು ವೇದಿಕೆಗೆ ಬಂದು ಬಾಂಗ್ಲಾ ಕ್ರಿಕೆಟ್ ಮುಖ್ಯಸ್ಥರಿಂದ ಬಹುಮಾನ ಸ್ವೀಕರಿಸಿದರು. ನಾಯಕ ಸಲ್ಮಾನ್ ಚೆಕ್ ಸ್ವೀಕರಿಸಿ ಅದನ್ನು ವೇದಿಕೆ ಮೇಲೆಯೇ ಎಸೆದು ಹೊರನಡೆದರು.

ಏತನ್ಮಧ್ಯೆ ಪಾಕ್ ಆಟಗಾರರು ಬಹುಮಾನ ಸ್ವೀಕರಿಸಲು ವೇದಿಕೆಗೆ ಕಾಲಿಡುತ್ತಿದ್ದಂತೆ ಸ್ಟ್ಯಾಂಡ್‌ನಲ್ಲಿದ್ದ ಭಾರತೀಯ ಅಭಿಮಾನಿ ಗಳು 'ಮೋದಿ.. ಮೋದಿ' ಎಂದು ಕೂಗಿ, ಪಾಕ್ ಆಟಗಾರರನ್ನ ಕಿಚಾಯಿಸಿದರು.

ಟ್ರೋಫಿ ಇಲ್ಲದೆ ಸಂಭ್ರಮಿಸಿದ ಭಾರತ

ಸ್ಥಳದಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ, ಸಂಘಟಕರು ಇದ್ದಕ್ಕಿದ್ದಂತೆ ಟ್ರೋಫಿಯನ್ನು ವೇದಿಕೆಯಿಂದ ಡ್ರೆಸ್ಸಿಂಗ್ ರೂಮ್‌ಗೆ ತೆಗೆದುಕೊಂಡು ಹೋದರು. ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಚಾಂಪಿಯನ್ ತಂಡಕ್ಕೆ ಟ್ರೋಫಿ ನೀಡದೆ ಇರುವ ಘಟನೆ ನಡೆದಿದೆ. ಟ್ರೋಫಿ ಇಲ್ಲದೆ ಟೀ ಇಂಡಿಯಾ ಆಟಗಾರರು ಸಂಭ್ರಮಿಸಿದರು.

ಸ್ಥಳದಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ, ಸಂಘಟಕರು ಇದ್ದಕ್ಕಿದ್ದಂತೆ ಟ್ರೋಫಿಯನ್ನು ವೇದಿಕೆಯಿಂದ ಡ್ರೆಸ್ಸಿಂಗ್ ರೂಮ್‌ಗೆ ತೆಗೆದುಕೊಂಡು ಹೋದರು. ಕ್ರಿಕೆಟ್ ಇತಿಹಾಸದಲ್ಲಿ ಬಹುಶಃ ಇದೇ ಮೊದಲ ಬಾರಿಗೆ ಚಾಂಪಿಯನ್ ತಂಡಕ್ಕೆ ಟ್ರೋಫಿ ನೀಡದೆ ಇರುವ ಘಟನೆ ನಡೆದಿದೆ. ಟ್ರೋಫಿ ಇಲ್ಲದೆ ಟೀ ಇಂಡಿಯಾ ಆಟಗಾರರು ಸಂಭ್ರಮಿಸಿದರು.

ಭಾರತದ ವಿರುದ್ಧ ವಿಷ ಕಾರುತ್ತಿದ್ದ ಮೊಹ್ಸಿನ್ ನಖ್ವಿ ಅವ್ರಿಂದ ಟ್ರೋಫಿಯನ್ನ ಸ್ವೀಕರಿಸದಿರಲು ಭಾರತ ತಂಡ ಈಗಾಗಲೇ ದೃಢ ನಿರ್ಧಾರ ತೆಗೆದುಕೊಂಡಿತ್ತು. ಅದರಂತೆಯೇ ನಡೆದುಕೊಂಡಿದೆ.

ನಖ್ವಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರು ಹಾಗೂ ಪಾಕ್​ ಗೃಹ ಸಚಿವರಾಗಿದ್ದಾರೆ. ಅದರಂತೆ ACC ಅಧ್ಯಕ್ಷರಾಗಿ ವಿಜೇತ ತಂಡಕ್ಕೆ ಟ್ರೋಫಿಯನ್ನು ಪ್ರದಾನ ಮಾಡಬೇಕಾಗಿತ್ತು ಹಾಗೂ ಎರಡೂ ತಂಡಗಳೊಂದಿಗೆ ಕೈಕುಲುಕಬೇಕಾಗಿತ್ತು. ಆದರೆ, ಭಾರತೀಯ ತಂಡವು ಪಾಕಿಸ್ತಾನದ ಯಾರೊಂದಿಗೂ ಕೈಕುಲುಕಬಾರದು ಅಥವಾ ಯಾವುದೇ ಮೈದಾನದ ಹೊರಗೆ ಸಂವಹನಗಳಲ್ಲಿ ತೊಡಗಬಾರದು ಎಂದುಕೊಂಡ ಹಿನ್ನೆಲೆ ನಖ್ವಿ ಕೈಯಲ್ಲಿ ಕಪ್​ ಸ್ವೀಕರಿಸಲು ಒಪ್ಪಲಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries