ಮಂಜೇಶ್ವರ: ಮೀಯಪದವು ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆಯ ಪ್ರಿ ಪ್ರೈಮರಿ ವಿಭಾಗದ ಮಕ್ಕಳ ಹೆತ್ತವರ ಸಭೆ ಮತ್ತು ತಿಳುವಳಿಕಾ ಶಿಬಿರ ಶಾಲಾ ಗ್ರಂಥಾಲಯದಲ್ಲಿ ನಡೆಯಿತು. ವಿದ್ಯಾರ್ಥಿಗಳಾದ ಆಶ್ಲೇಷ ಯಂ, ಸಾನ್ವಿ ರಾವ್ ಮತ್ತು ಪಾವನಿ ರಾವ್ ಪ್ರಾರ್ಥನಾ ಗೀತೆ ಹಾಡಿದರು. ನಿವೃತ್ತ ಮುಖ್ಯೋಪಾಧ್ಯಾಯ ಹಾಗೂ ಆಡಳಿತ ಸಲಹೆಗಾರ ಶ್ರೀಧರ್ ರಾವ್ ಆರ್.ಯಂ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ನರ್ಸರಿ ವಿಭಾಗದ ಕಾರ್ಯಚಟುವಟಿಕೆಗಳ ಬಗ್ಗೆ ಮಾತನಾಡಿದರು. ಉಪ್ಪಳ ಸರ್ಕಾರಿ ಉನ್ನತ ಪ್ರೌಢ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ಶಶಿಕಲ ಟೀಚರ್ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಜಗದೀಶ್ ಶೆಟ್ಟಿಗಾರ್ ಶುಭ ಹಾರೈಸಿದರು. ಮುಖ್ಯೋಪಾಧ್ಯಾಯ ಅರವಿಂದಾಕ್ಷ ಭಂಡಾರಿ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಪ್ರಿ ಪ್ರೈಮರಿ ವಿಭಾಗದ ಹಿರಿಯ ಶಿಕ್ಷಕಿ ರಾಜೇಶ್ವರಿ ವಂದಿಸಿದರು. ಕಿರಿಯ ಪ್ರಾಥಮಿಕ ವಿಭಾಗದ ಶಾಲಾ ಸಂಪನ್ಮೂಲ ತಂಡದ ಸಂಚಾಲಕ ಸುನಿಲ್ ಕುಮಾರ್ ಯಂ. ನಿರೂಪಿಸಿದರು. ಶಶಿಕಲ ಟೀಚರ್ ಅವರು ಹೆತ್ತವರಿಗೆ ತಿಳುವಳಿಕಾ ಶಿಬಿರ ನಡೆಸಿದರು.




.jpg)
