ಮುಂಬೈ: ಮಹಾರಾಷ್ಟ್ರದ ಲಾತೂರ್‌ನಲ್ಲಿ ಭಾರಿ ಮಳೆಯಿಂದಾಗಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ಐವರ ಮೃತದೇಹಗಳನ್ನು 40 ಗಂಟೆಗಳ ಕಾಲ ಶೋಧ ಕಾರ್ಯಾಚರಣೆ ನಡೆಸಿ ಹೊರತೆಗೆಯಲಾಯಿತು ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಹೊಲದಿಂದ ಹಿಂತಿರುಗುತ್ತಿದ್ದಾಗ 27 ವರ್ಷದ ಸುದರ್ಶನ್ ತಿರ್ರು ನದಿಯಲ್ಲಿ ಕೊಚ್ಚಿ ಹೋಗಿದ್ದರು.
ಜಲ್ಕೋಟ್ ತಾಲ್ಲೂಕಿನ ಸೇತುವೆಯೊಂದರ ಮೇಲೆ ಆಟೊರಿಕ್ಷಾದಲ್ಲಿ ಪ್ರಮಾಣಿಸುವ ವೇಳೆ ಪ್ರಬಲ ಪ್ರವಾಹದಿಂದ ಐವರು ಕೊಚ್ಚಿ ಹೋಗಿದ್ದರು, ಈ ಪೈಕಿ ಮೂವರನ್ನು ರಕ್ಷಿಸಲಾಗಿತ್ತು. ನಾಪತ್ತೆಯಾಗಿದ್ದ ಆಟೋರಿಕ್ಷಾ ಚಾಲಕ ಸಂಗ್ರಾಮ್ ಸೋನ್‌ಕಾಂಬ್ಲೆ ಹಾಗೂ ವಿಠ್ಠಲ್ ಗವಳಿ ಅವರ ಮೃತದೇಹಗಳನ್ನು ಹೊರತೆಗೆಯಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.




