ತಿರುವನಂತಪುರಂ: ಬಿಹಾರ ಸಂಬಂಧಿತ ಪೋಸ್ಟರ್ ವಿವಾದದಲ್ಲಿ ಕೆಪಿಸಿಸಿ ಡಿಜಿಟಲ್ ಸೆಲ್ ಮುಖ್ಯಸ್ಥ ವಿ ಟಿ ಬಲರಾಮ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಸನ್ನಿ ಜೋಸೆಫ್ ಹೇಳಿದ್ದಾರೆ.
ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ವಿ ಟಿ ಬಲರಾಮ್ ರಾಜೀನಾಮೆ ನೀಡಿಲ್ಲ ಅಥವಾ ಪಕ್ಷವು ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.
ಕೆಪಿಸಿಸಿ ಉಪಾಧ್ಯಕ್ಷ ಬಲರಾಮ್ ಇನ್ನೂ ಡಿಜಿಟಲ್ ಮೀಡಿಯಾ ಸೆಲ್ (ಡಿಎಂಸಿ) ಅಧ್ಯಕ್ಷರಾಗಿ ಮುಂದುವರೆದಿದ್ದಾರೆ, ಅಲ್ಲಿ ಅವರು ಹೆಚ್ಚುವರಿ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಹಾರ ವಿಷಯದ ಕುರಿತು ವಿವಾದವನ್ನು ಸೃಷ್ಟಿಸಿದ ಪೆÇೀಸ್ಟರ್ ಬಗ್ಗೆ ಕೆಪಿಸಿಸಿ ಅತೃಪ್ತವಾಗಿದೆ ಎಂದು ಸನ್ನಿ ಜೋಸೆಫ್ ಸ್ಪಷ್ಟಪಡಿಸಿದ್ದಾರೆ. ಕೆಪಿಸಿಸಿ ಡಿಜಿಟಲ್ ಮೀಡಿಯಾ ಸೆಲ್ ಎಐಸಿಸಿಯ ನಿಲುವು ಮತ್ತು ಸೂಚನೆಗಳ ಪ್ರಕಾರ ಕಾರ್ಯನಿರ್ವಹಿಸುತ್ತಿದೆ.
ಬಿಹಾರಕ್ಕೆ ಸಂಬಂಧಿಸಿದ ಪೋಸ್ಟರ್ ಇದಕ್ಕಿಂತ ಭಿನ್ನವಾಗಿತ್ತು. ವಿವಾದಾತ್ಮಕ ಪೋಸ್ಟ್ ಗಮನಕ್ಕೆ ಬಂದ ತಕ್ಷಣ, ಕೆಪಿಸಿಸಿ ಡಿಜಿಟಲ್ ಮಾಧ್ಯಮದ ಉಸ್ತುವಾರಿ ಉಪಾಧ್ಯಕ್ಷ ವಿಟಿ ಬಲರಾಮ್ ಮತ್ತು ಪಕ್ಷದ ನಾಯಕತ್ವವು ಎಕ್ಸ್ ಪ್ಲಾಟ್‍ಫಾರ್ಮ್ ತಂಡಕ್ಕೆ ಅದರ ಅನುಚಿತತೆಯನ್ನು ಎತ್ತಿ ತೋರಿಸಿ ಪೋಸ್ಟ್ ಅನ್ನು ತೆಗೆದುಹಾಕುವಂತೆ ಕೇಳಿಕೊಂಡರು. ಅದರಂತೆ, ಪೋಸ್ಟ್ ಅನ್ನು ತೆಗೆದುಹಾಕಲಾಯಿತು.






