ತ್ರಿಶೂರ್: ಕೇಂದ್ರ ಸಚಿವ ಸುರೇಶ್ ಗೋಪಿ ಅವರ ಸೋಮವಾರ ತ್ರಿಶೂರ್‍ನಲ್ಲಿ ನಿಗದಿಪಡಿಸಲಾಗಿದ್ದ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. ದೆಹಲಿಗೆ ತುರ್ತಾಗಿ ತೆರಳಬೇಕಾಗಿರುವುದರಿಂದ ನಿಗದಿತ ಕಾರ್ಯಕ್ರಮಗಳಿಗೆ ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ತ್ರಿಶೂರ್‍ನಲ್ಲಿ ಓಣಂ ಆಚರಣೆ ಮತ್ತು ಪುಲಿಕಳಿ(ಹುಲಿ ಕುಣಿತ) ಮಹೋತ್ಸವದಲ್ಲಿ ತಮ್ಮ ಉಪಸ್ಥಿತಿಯನ್ನು ನಿರೀಕ್ಷಿಸಿದವರಿಗೆ ಕ್ಷಮೆಯಾಚಿಸುವುದಾಗಿ ಅವರು ಫೇಸ್‍ಬುಕ್‍ನಲ್ಲಿ ಬರೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಸೂಚನೆಯ ಮೇರೆಗೆ ತುರ್ತು ಪ್ರವಾಸ ಕೈಗೊಳ್ಳಲಾಗಿದೆ. ಭಾನುವಾರ ಸಂಜೆ 4 ಗಂಟೆಯಿಂದ ನಿಗದಿಯಾಗಿದ್ದ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ ನಂತರ, ತಾವು ಆದಷ್ಟು ಬೇಗ ದೆಹಲಿಗೆ ತೆರಳಬೇಕಾಯಿತು ಎಂದು ಕೇಂದ್ರ ಸಚಿವರು ಸ್ಪಷ್ಟಪಡಿಸಿದ್ದಾರೆ.




