ಬದಿಯಡ್ಕ: ಮಾನ್ಯ ಶ್ರೀ ಅಯ್ಯಪ್ಪ ಭಜನಾ ಮಂದಿರದ ಬೆಳ್ಳಿ ಅಭಿಯಾನದ ಉದ್ಘಾಟನೆ ಇಂದು(ಸೆ.28) ಬೆಳಿಗ್ಗೆ 10ಕ್ಕೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮಂದಿರ ಪರಿಸರದಲ್ಲಿ ನಡೆಯಲಿದೆ.
ಬೆಳಿಗ್ಗೆ 10ಕ್ಕೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಶ್ರೀಮಂದಿರದ ಶ್ರೀಅಯ್ಯಪ್ಪ ಸೇವಾ ಸಂಘದ ಅಧ್ಯಕ್ಷ ನಾರಾಯಣ ಮಣಿಯಾಣಿ ಮಾನ್ಯ ಅಧ್ಯಕ್ಷತೆ ವಹಿಸುವರು.ಉದ್ಯಮಿ ಗೋಪಾಲಕೃಷ್ಣ ಪೈ ಬದಿಯಡ್ಕ ಅವರು ಪ್ರಥಮ ಬೆಳ್ಳಿ ಸಮರ್ಪಣೆಗೈದು ಉದ್ಘಾಟಿಸುವರು. ಕೊಲ್ಲ ಶ್ರೀದೇವಿ ಮೂಕಾಂಬಿಕ ದೇವಸ್ಥಾನದ ಅಧ್ಯಕ್ಷ ಮಧುಸೂದನ ಅಯರ್ ಮುಖ್ಯ ಅತಿಥಿಗಳಾಗಿರುವರು. ಗುರುಸ್ವಾಮಿ ಶಂಕರ ದೇವಾಂಗ ಗೌರವ ಉಪಸ್ಥಿತರಿರುವರು. ಮಾನ ಮಾಸ್ತರ್ ಮಾನ್ಯ, ಕುಂಞಪ್ಪ ನಾಯ್ಕ, ನಾರಾಯಣ ಗುರುಸ್ವಾಮಿ, ನಾರಾಯಣ ಮಾಸ್ತರ್ ಚರ್ಲಡ್ಕ, ಕುಂಞÂಕಣ್ಣ ಮಣಿಯಾಣಿ, ಗೋಪಾಲಕೃಷ್ಣ ವಾಂತಿಚ್ಚಾಲ್, ನ್ಯಾಯವಾದಿ ರವಿ ಮದಂಬೈಲು, ವೇಣುಗೋಪಾಲ ತತ್ವಮಸಿ, ಪಿ.ಎಂ.ವೆಂಕಪ್ಪ ನಾಯ್ಕ, ರಾಮ ಕಾರ್ಮಾರು, ಸಂತೋಷ್ ಕುಮಾರ್ ಎಸ್., ನಿತ್ಯಾನಂದ ಎಂ.ಆರ್.ಮಾನ್ಯ ಶುಭಾಶಂಸನೆಗೈಯ್ಯುವರು. ಕೆ.ಶ್ಯಾಮಪ್ರಸಾದ್ ಮಾನ್ಯ, ಸೋಮಪ್ಪ ನಾಯ್ಕ, ಸುಂದರ ಶೆಟ್ಟಿ ಕೊಲ್ಲಂಗಾನ ಮೊದಲಾದವರು ನೇತೃತ್ವ ವಹಿಸುವರು.





