ಕಾಸರಗೋಡು: ಚೆಂಗಳ ನಾಲ್ಕನೇ ಮೈಲಿಗಲ್ಲು ಸನಿಹ ಕಾರು ಮತ್ತು ಟಿಪ್ಪರ್ ಲಾರಿ ಡಿಕ್ಕಿಯಾಗಿ, ಕರ್ತವ್ಯದಲ್ಲಿದ್ದ ಸಿವಿಲ್ ಪೊಲೀಸ್ ಅಧಿಕಾರಿ, ಚೆರ್ವತ್ತೂರು ಮಯಿಚ್ಚ ನಿವಾಸಿ ಕೆ.ಕೆ ಸಜೀಶ್(40)ಮೃತಪಟ್ಟಿದ್ದಾರೆ. ಇವರ ಜತೆಗಿದ್ದ ಸಹೋದ್ಯೋಗಿ ಸುಭಾಶ್ಚಂದ್ರನ್ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೇಕಲ ಡಿವೈಎಸ್‍ಪಿ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿರುವ 'ಡಾನ್ಸಫ್'ತಂಡದ ಸದಸ್ಯರಾಗಿದ್ದ ಸಜೀಶ್, ಶುಕ್ರವಾರ ನಸುಕಿಗೆ ಆಲ್ಟೋ ಕಾರಿನಲ್ಲಿ ಮಾದಕವಸ್ತು ಸಾಗಾಟ ಪ್ರಕರಣದ ಆರೋಪಿಯೊಬ್ಬನ ಸೆರೆಹಿಡಿಯುವ ನಿಟ್ಟಿನಲ್ಲಿ ಸಂಚರಿಸುವ ಮಧ್ಯೆ ಅಪಘಾತ ಸಂಭವಿಸಿದೆ. ಗಾಯಾಳುಗಳಿಬ್ಬರನ್ನೂ ಸನಿಹದ ಚೆಂಗಳ ಇ.ಕೆ ನಾಯನಾರ್ ಸ್ಮಾರಕ ಸಹಕಾರಿ ಆಸ್ಪತ್ರೆಗೆ ದಾಖಲಿಸಿದರೂ, ಸಜೀಶ್ ಪ್ರಾಣವುಳಿಸಲಾಗಿಲ್ಲ.
ಮಾದಕ ದ್ರವ್ಯ ಸಾಗಾಟದ ಬಗ್ಗೆ ಲಭಿಸಿದ ಮಾಹಿತಿಯನ್ವಯ ಪೆÇೀಲೀಸ್ ವಾಹನತೊರೆದು, ಖಾಸಗಿ ಕಾರಿನಲ್ಲಿ ತೆರಳುವ ಮಧ್ಯೆ ಅಪಘಾತ ಸಂಭವಿಸಿದೆ. ಮೃತದೇಹ ಶನಿವಾರ ಎಸ್‍ಪಿ ಕಚೇರಿಯಲ್ಲಿ ಅಂತಿಮದರ್ಶನದ ಬಳಿಕ ಊರಿಗೆ ಕೊಂಡೊಯ್ದು ಅಂತ್ಯಸಂಸ್ಕಾರ ನಡೆಯಲಿದೆ.





