ಹೈದರಾಬಾದ್: ಭಾನುವಾರ ಸಂಜೆ ಹೈದರಾಬಾದ್‌ನಲ್ಲಿ ಭಾರಿ ಮಳೆ ಸುರಿದಿದೆ. ಇದರ ಪರಿಣಾಮ ನಗರದ ಹಲವು ರಸ್ತೆಗಳಲ್ಲಿ ನೀರು ನಿಂತು, ಇಬ್ಬರು ಚರಂಡಿಯಲ್ಲಿ ಕೊಚ್ಚಿಹೋಗಿದ್ದಾರೆ.
ಅಫ್ಜಲ್‌ನಗರದಲ್ಲಿ ರಾತ್ರಿ 8.30ರ ಸುಮಾರಿಗೆ ಚರಂಡಿಯಲ್ಲಿ ನೀರಿನ ಹರಿವು ಹೆಚ್ಚಾಗಿ, ಈ ದುರಂತ ಸಂಭವಿಸಿದೆ ಎಂದು ಪೊಲಿಸರು ಮಾಹಿತಿ ನೀಡಿದ್ದಾರೆ.
ಕೊಚ್ಚಿಹೋದವರ ಪತ್ತೆಗಾಗಿ ಶೋಧಕಾರ್ಯ ಮುಂದುವರಿದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ನಗರದ ವಿವಿಧ ಬಡವಾಣೆಗಳಲ್ಲಿ 110 ಸೆಂ.ಮೀಗಿಂತ ಹೆಚ್ಚು ಹೆಚ್ಚು ಮಳೆ ಸುರಿದಿದೆ. ಭಾರಿ ಮಳೆಯ ಪರಿಣಾಮ ನಗರದಲ್ಲಿ ವಿವಿಧೆಡೆ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು.




