ಕಾಸರಗೋಡು: ಬ್ರಹ್ಮಶ್ರೀ ನಾರಾಯಣಗುರುಗಳ 171ನೇ ಜಯಂತ್ಯುತ್ಸವ ನೆಲ್ಲಿಕುಂಜೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜರುಗಿತು. ಶ್ರೀ ನಾರಾಯಣ ಧರ್ಮ ಸೇವಾ ಸಂಘದ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸೇವಾ ಸಂಘದ ಉಪಾಧ್ಯಕ್ಷ ಗಣೇಶ್ ಪಾರಕಟ್ಟೆ ಧ್ವಜಾರೋಹಣ ನೆರವೇರಿಸುವ ಮೂಲಕ ಸಮಾರಂಭ ಉದ್ಘಾಟಿಸಿದರು. ಸಂಗದ ಸ್ಥಾಪಕ ಸದಸ್ಯ ಶ್ರೀ ಮುಕುಂದನ್ ಅವರು ಗುರುಗಳ ಸಂದೇಶ ನೀಡಿದರು.
ಶ್ರೀ ನಾರಾಯಣ ಧರ್ಮ ಸೇವಾ ಸಂಘದ ಅಧ್ಯಕ್ಷೆ ನಿರ್ಮಲಾ ಉಪಂದ್ರನ್, ಕ್ಷೇತ್ರ ಸಮಿತಿಯ ರಕ್ಷಾಧಿಕಾರಿ ಡಾ. ಕೆ. ಎನ್. ವೆಂಕಟ್ರಮಣ ಹೊಳ್ಳ ಉಪಸ್ಥಿತರಿದ್ದರು. ಕಾರ್ಯದರ್ಶಿ ಮಹೇಶ್ ಸ್ವಾಗತಿಸಿದರು. ಆರ್. ಪಿ. ರಮೇಶ್ ಬಾಬು ವಂದಿಸಿದರು.


