ಕೊಚ್ಚಿ: ಮಂಜುಮ್ಮಲ್ ಬಾಯ್ಸ್ ಚಿತ್ರದ ಲಾಭದ ಪಾಲಿಗೆ ಸಂಬಂಧಿಸಿದ ವಂಚನೆ ಪ್ರಕರಣದಲ್ಲಿ ಜಾಮೀನು ಷರತ್ತುಗಳಲ್ಲಿ ಸಡಿಲಿಕೆ ಕೋರಿ ನಟ ಸೌಬಿನ್ ಶಾಹಿರ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ವಿಚಾರಣಾ ನ್ಯಾಯಾಲಯದ ಕ್ರಮವನ್ನು ಪ್ರಶ್ನಿಸಿ ನಟ ಹೈಕೋರ್ಟ್ ಮೆಟ್ಟಿಲೇರಿದ್ದರು.
ಪಾಸ್ ಪೋರ್ಟ್ ಅನ್ನು ಒಪ್ಪಿಸಿ ವಿದೇಶಕ್ಕೆ ಪ್ರಯಾಣಿಸಲು ಅವಕಾಶ ನೀಡುವಂತೆ ಅವರು ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಮಂಜುಮ್ಮಲ್ ಬಾಯ್ಸ್ ಚಿತ್ರದ ನಿರ್ಮಾಣಕ್ಕೆ ಸಂಬಂಧಿಸಿದಂತೆ ಲಾಭದ ಪಾಲು ನೀಡುವ ಭರವಸೆ ನೀಡಿ ವಂಚನೆ ಪ್ರಕರಣದಲ್ಲಿ ಸೌಬಿನ್ ಶಾಹಿರ್ ಅವರನ್ನು ಮರಡು ಪೆÇಲೀಸರು ಈ ಹಿಂದೆ ಬಂಧಿಸಿದ್ದರು. ಪ್ರಕರಣದಲ್ಲಿ ನಟನಿಗೆ ಹೈಕೋರ್ಟ್ ಈ ಹಿಂದೆ ನಿರೀಕ್ಷಣಾ ಜಾಮೀನು ನೀಡಿತ್ತು.
ಈ ಮಧ್ಯೆ, ಮಂಜುಮ್ಮಲ್ ಬಾಯ್ಸ್ ಚಿತ್ರಕ್ಕೆ ಸಂಬಂಧಿಸಿದ ವಂಚನೆ ಪ್ರಕರಣದ ಆರೋಪಿಗಳಿಗೆ ಸಹಾಯ ಮಾಡಿದ್ದಾರೆ ಎಂಬ ಆರೋಪದ ನಂತರ ಮರಡು ಎಸ್‍ಐ ಕೆ.ಕೆ. ಸಜೀಶ್ ಅವರನ್ನು ಎರ್ನಾಕುಲಂ ಪಶ್ಚಿಮ ಸಂಚಾರ ಠಾಣೆಗೆ ವರ್ಗಾಯಿಸಲಾಗಿದೆ. ನಟನಿಗೆ ಸಂಬಂಧಿಸಿದ ಪ್ರಕರಣದಲ್ಲಿ ಬ್ಯಾಂಕ್ ವಹಿವಾಟಿನ ಪ್ರಮುಖ ದಾಖಲೆಗಳನ್ನು ಕಡತದಿಂದ ತೆಗೆದುಹಾಕಿದ ನಂತರ ಕ್ರಮ ಕೈಗೊಳ್ಳಲಾಗಿದೆ. ಪ್ರಕರಣದ ಪ್ರಗತಿಯನ್ನು ನಿರ್ಣಯಿಸಲು ಡಿಸಿಪಿ ಕಡತವನ್ನು ಕರೆಸಿ ಪರಿಶೀಲಿಸಿದಾಗ ಅಕ್ರಮಗಳು ಪತ್ತೆಯಾಗಿವೆ.
ಮಂಜುಮ್ಮಲ್ ಬಾಯ್ಸ್ ಚಿತ್ರ ನಿರ್ಮಾಣಕ್ಕೆ ಶೇ.40 ರಷ್ಟು ಲಾಭದ ಪಾಲನ್ನು ನೀಡುವ ಭರವಸೆ ನೀಡಿ ಆರೋಪಿಗಳು 7 ಕೋಟಿ ರೂಪಾಯಿಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬುದು ಪ್ರಕರಣ. ಆರೂರ್ ಮೂಲದ ಸಿರಾಜ್ ಅವರು ಚಿತ್ರಕ್ಕಾಗಿ 7 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿರುವುದಾಗಿ ಮತ್ತು ಹೂಡಿಕೆ ಮತ್ತು ಲಾಭದ ಪಾಲನ್ನು ಪಾವತಿಸಿಲ್ಲ ಎಂದು ಸಲ್ಲಿಸಿದ ದೂರಿನ ಆಧಾರದ ಮೇಲೆ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದರು.
ಸೌಬಿನ್ ಶಾಹಿರ್, ಬಾಬು ಶಾಹಿರ್ ಮತ್ತು ಶಾನ್ ಆಂಟನಿ ವಿರುದ್ಧ ಮರಡು ಪೆÇಲೀಸರು ದಾಖಲಿಸಿದ್ದ ಪ್ರಕರಣದಲ್ಲಿ ಮೂವರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿತ್ತು. ಪೆÇಲೀಸರು ಸಲ್ಲಿಸಿದ ತನಿಖಾ ವರದಿಯಲ್ಲಿ ಚಿತ್ರದ ನಿರ್ಮಾಪಕರು ಪೂರ್ವ ಯೋಜಿತ ವಂಚನೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಆರೋಪಿಗಳಿಗೆ ನೀಡಲಾದ ಜಾಮೀನಿನ ವಿರುದ್ಧ ಸುಪ್ರೀಂ ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಲಾಗಿದೆ.




