ಉಪ್ಪಳ: ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಕೂಲ್ ಒಲಿಂಪಿಕ್ಸ್ ವಿವಿಧ ಕ್ರೀಡಾ ಸ್ಪರ್ಧೆಗಳೊಂದಿಗೆ ನೆರವೇರಿತು. ಕಾಸರಗೋಡು ಜಿಲ್ಲಾ ಪಂಚಾಯತಿ ಸದಸ್ಯ ಗೋಲ್ಡನ್ ರೆಹಮಾನ್ ಅವರು ಶಾಲಾ ಧ್ವಜವನ್ನು ಶಾಲಾ ಕ್ರೀಡಾ ಮಂತ್ರಿ ಸಾಹಿಲ್ ಗೆ ಹಸ್ತಾಂತರಿಸುವ ಮೂಲಕ ಕ್ರೀಡಾಕೂಟವನ್ನು ಉದ್ಘಾಟಿಸಿದರು.
ಶಾಲಾ ಪಿ.ಟಿ.ಎ ಅಧ್ಯಕ್ಷ ಇಬ್ರಾಹಿಂ ಹನೀಫಿ ಶುಭ ಹಾರೈಸಿದರು. ಮುಖ್ಯೋಪಾಧ್ಯಾಯಿನಿ ಚಿತ್ರಾವತಿ ಚಿಗುರುಪಾದೆ ಸ್ವಾಗತಿಸಿ, ಶಿಕ್ಷಕ ಅಬ್ದುಲ್ ಬಶೀರ್ ವಂದಿಸಿದರು. ರಿಯಾಜ್ ಪೆರಿಂಗಡಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಬಳಿಕ ವಿದ್ಯಾರ್ಥಿಗಳ ಮ್ಯಾರಥಾನ್ ನಡೆಯಿತು. ಸಮಾರೋಪ ಸಮಾರಂಭ ಮಂಜೇಶ್ವರ ಬಿ.ಆರ್.ಸಿಯ ಬಿ.ಪಿ.ಸಿ. ಸುಮಾ ದೇವಿ, ಶಾಲಾ ಯಂ.ಪಿ.ಟಿ.ಎ. ಅಧ್ಯಕ್ಷೆ ಸುಷ್ಮಾ, ಬಿ.ಆರ್.ಸಿ. ವಿಶೇಷ ತರಬೇತುದಾರೆ ಬಿಂದ್ಯಾ ಮತ್ತು ಅನಿತಾ ಅವರ ಉಪಸ್ಥಿತಿಯಲ್ಲಿ ನಡೆಯಿತು. ಜಯಶಾಲಿಗಳಾದ ನೀಲಿ ತಂಡಕ್ಕೆ ವಿನ್ನರ್ ಟ್ರೋಫಿಯನ್ನು ಶಿಕ್ಷಕಿ ಐಶ್ವರ್ಯ ಮತ್ತು ಹಳದಿ ತಂಡಕ್ಕೆ ರನ್ನರ್ ಟ್ರೋಫಿಯನ್ನು ಹಳದಿ ತಂಡದ ಕ್ಯಾಪ್ಟನ್ ಶಿಕ್ಷಕಿ ಅನುಕೃಷ್ಣ ಮತ್ತು ಅವರ ತಂಡದ ಸದಸ್ಯರಿಗೆ ಶಾಲಾ ಮುಖ್ಯೋಪಾಧ್ಯಾಯಿನಿ ಚಿತ್ರಾವತಿ ಚಿಗುರುಪಾದೆ ಗಣ್ಯರೊಂದಿಗೆ ನೀಡಿದರು. ಹೆತ್ತವರ ಸಮಕ್ಷಮದಲ್ಲಿ ವಿಜೇತರಿಗೆ ಕಿರೀಟ ತೊಡಿಸಿ, ಪ್ರಶಸ್ತಿ ಪತ್ರ, ಟ್ರೋಫಿ ನೀಡಿ ಗೌರವಿಸಲಾಯಿತು ಶಿಕ್ಷಕಿ ರೇಷ್ಮಾ ಅವರ ನೇತೃತ್ವದಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಜಸೀಲ ಟೀಚರ್ ಸ್ವಾಗತಿಸಿ, ಧನ್ಯ ವಂದಿಸಿದರು. ಅನಿತಾ ಟೀಚರ್ ನಿರ್ವಹಿಸಿದರು.




.jpg)
