HEALTH TIPS

ರಾಜ್ಯಗಳ ಮೇಲೆ ಭಾಷಾ ಹೇರಿಕೆ ಇಲ್ಲ: ಧರ್ಮೇಂದ್ರ ಪ್ರಧಾನ್

ಚೆನ್ನೈ: 'ಕೇಂದ್ರವು ಯಾವುದೇ ರಾಜ್ಯದ ಮೇಲೆ ಯಾವುದೇ ಭಾಷೆಯನ್ನು ಹೇರುತ್ತಿಲ್ಲ' ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ಐಐಟಿ ಮದ್ರಾಸ್‌ನಲ್ಲಿ ನಡೆದ 'ಥಿಂಕ್‌ ಇಂಡಿಯಾ ದಕ್ಷಿಣಪಥ ಶೃಂಗಸಭೆ- 2025'ರಲ್ಲಿ ಭಾಗವಹಿಸಿದ ಅವರು, ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

'ಕೇಂದ್ರವು ರಾಜ್ಯಗಳ ಮೇಲೆ 'ತ್ರಿಭಾಷಾ ನೀತಿ'ಯನ್ನು ಹೇರುತ್ತಿದೆ ಎನ್ನುವುದು ರಾಜಕೀಯ ಪ್ರೇರಿತ ಆರೋಪ' ಎಂದು ಅವರು ಹೇಳಿದರು.

'ನಾವು ಯಾರ ಮೇಲೂ ಯಾವುದೇ ಭಾಷೆಯನ್ನು ಹೇರುತ್ತಿಲ್ಲ. 1 ಮತ್ತು 2ನೇ ತರಗತಿಗಳಿಗೆ ದ್ವಿಭಾಷಾ ಸೂತ್ರ ಇರುತ್ತದೆ. ಇದರಲ್ಲಿ ಒಂದು ಮಾತೃಭಾಷೆ. ತಮಿಳುನಾಡಿನಲ್ಲಾದರೆ ಇದು ತಮಿಳು ಭಾಷೆಯಾಗಿರುತ್ತದೆ. ಇದರ ಜತೆಗೆ ನಿಮ್ಮ ಆಯ್ಕೆಯ ಇನ್ನೊಂದು ಭಾಷೆಯನ್ನು ಕಲಿಸಬಹುದು' ಎಂದರು.

6ರಿಂದ 10ನೇ ತರಗತಿವರೆಗೆ 'ತ್ರಿಭಾಷಾ ಸೂತ್ರ' ಇರುತ್ತದೆ. ಒಂದು ಮಾತೃಭಾಷೆಯಾದರೆ, ಇನ್ನೆರಡು ಆಯ್ಕೆಯ ಭಾಷೆಯಾಗಿರುತ್ತವೆ ಎಂದು ಪ್ರಧಾನ್‌ ಸ್ಪಷ್ಟಪಡಿಸಿದರು.

'ಉತ್ತರ ಪ್ರದೇಶದಂತ ರಾಜ್ಯಗಳಲ್ಲಿ ತ್ರಿಭಾಷಾ ಸೂತ್ರವನ್ನು ಹೇಗೆ ಜಾರಿಗೊಳಿಸುತ್ತೀರಿ ಎಂಬ ಪ್ರಶ್ನೆಗೆ, 'ನಾವು ಆ ರಾಜ್ಯದಲ್ಲೂ ಈ ಸೂತ್ರ ಜಾರಿಗೊಳಿಸುತ್ತೇವೆ. ವಿದ್ಯಾರ್ಥಿಯೊಬ್ಬ ಹಿಂದಿಯನ್ನು ಮಾತೃಭಾಷೆಯಾಗಿ, ನಂತರ ಮರಾಠಿಯನ್ನು ಬಳಿಕ ತಮಿಳನ್ನೂ ಕಲಿಯುತ್ತಾನೆ. ಉತ್ತರ ಪ್ರದೇಶದಲ್ಲಿ ಮೂರನೆಯ ಭಾಷೆಯಾಗಿ 'ತಮಿಳು' ಕಲಿಯಲೂ ಅವಕಾಶವಿದೆ' ಎಂದು ಅವರು ಹೇಳಿದರು.

ಭಾಷೆಗಳು ಯಾವಾಗಲೂ ಸಹಾಯಕವಾಗಿರುತ್ತವೆ. ರಾಜಕೀಯವಾಗಿ ಸಂಕುಚಿತ ಆಲೋಚನೆಗಳನ್ನು ಹೊಂದಿರುವವರು ಸಮಸ್ಯೆಗಳನ್ನು ಸೃಷ್ಟಿಸುತ್ತಾರೆ ಎಂದ ಪ್ರಧಾನ್‌, ಹಲವು ರಾಜ್ಯಗಳು ರಾಷ್ಟ್ರೀಯ ಶಿಕ್ಷಣ ನೀತಿಗೂ ಮುನ್ನವೇ ತ್ರಿಭಾಷಾ ಸೂತ್ರವನ್ನು ಜಾರಿಗೊಳಿಸಲು ಹೊರಟಿವೆ ಎಂದರು.

'ತೆಲುಗು ಮಾತನಾಡುವ ವಿದ್ಯಾರ್ಥಿಗಳಿಗೆ 10 ಭಾಷೆಗಳನ್ನು ಕಲಿಸಲು ಪ್ರೋತ್ಸಾಹಿಸಲಾಗುವುದು ಎಂಬ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಖಂಡಿತವಾಗಿಯೂ, ಹಲವು ಭಾಷೆಗಳಲ್ಲಿ ಪ್ರಾವೀಣ್ಯತೆ ಗಳಿಸಿದವರು 'ಜಾಗತಿಕವಾಗಿ ಸ್ಪರ್ಧಾತ್ಮಕ'ತೆ ಬೆಳೆಸಿಕೊಳ್ಳುತ್ತಾರೆ' ಎಂದು ಹೇಳಿದರು.

ಧರ್ಮೇಂದ್ರ ಪ್ರಧಾನ್ ಕೇಂದ್ರ ಶಿಕ್ಷಣ ಸಚಿವಭಾಷಾ ವಿಭಜನೆ ಸೃಷ್ಟಿಸಲು ಪ್ರಯತ್ನಿಸುವವರು ವಿಫಲರಾಗುತ್ತಿದ್ದಾರೆ. ಸಮಾಜವು ಅವರಿಗಿಂತ ಬಹಳ ಮುಂದೆ ಸಾಗುತ್ತಿದೆ. 11ನೇ ಮತ್ತು 12ನೇ ತರಗತಿಯ ಪಠ್ಯಕ್ರಮದಲ್ಲಿ ಕೌಶಲ ಆಧಾರಿತ ಕಲಿಕೆಯನ್ನು ಸೇರ್ಪಡೆ ಮಾಡುವ ಪ್ರಸ್ತಾವವನ್ನು ಕೇಂದ್ರ ಸರ್ಕಾರ ಪರಿಗಣಿಸಲಿದೆ ಎಂದು ಪ್ರಧಾನ್‌ ಹೇಳಿದರು. 'ಸೂಕ್ತ ಹಂತದಲ್ಲಿ ಕಲಿಕಾ ಮಾದರಿಯಲ್ಲಿ ಬದಲಾವಣೆ ಆಗಬೇಕು. 2020ರ ರಾಷ್ಟ್ರೀಯ ಶಿಕ್ಷಣ ನೀತಿಯು ಇದನ್ನು ಶಿಫಾರಸ್ಸು ಮಾಡುತ್ತದೆ' ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries