ಕಾಸರಗೋಡು : ಕಾಸರಗೋಡು ಕೋಟೆ ಬಾಗಿಲಿನಲ್ಲಿರುವ ಪಳ್ಳದಕೊಟ್ಯ ಶ್ರೀ ಧೂಮಾವತಿ ದೈವ ಕೋಲ ಕಾಸರಗೋಡು ಕೋಟೆ ನಾಯಕರ ಮನೆತನದವರು, ಸಮಾಜದವರು, ಹಾಗೂ ಊರವರ ಸಹಕಾರದೊಂದಿಗೆ ದೀಪಾವಳಿ ದಿನದಂದು, ಪಳ್ಳದಕೊಟ್ಯ ತರವಾಡಿನಿಂದ ವೈಭವದಿಂದ ಬಂಡಾರ ಮೆರವಣಿಗೆ ಮೂಲಕ ಬಂದು ನಡೆಯುವುದು ಪ್ರಾಚೀನದಿಂದ ನಡೆದು ಬರುವುದು ಇತಿಹಾಸ.
ಈ ಐತಿಹಾಸಿಕ ಪರಂಪರೆಯ ಶ್ರೀ ಪಳ್ಳದಕೊಟ್ಯ ಶ್ರೀ ಧೂಮಾವತಿ ದೈವಕೋಲದ ಆಮಂತ್ರಣ ಪತ್ರಿಕೆ ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ದೇವಸ್ಥಾನದಲ್ಲಿ ನಡೆಯುತ್ತಿರುವ ಕಾಸರಗೋಡು ದಸರಾ ಸಂಭ್ರಮ ವೇದಿಕೆಯಲ್ಲಿ ಬಿಡುಗಡೆಗೊಳಿಸಲಾಯಿತು. ಕೋಟೆ ನಾಯಕರ ಕುಲ ದೇವಸ್ಥಾನ ಸಮಿತಿ ಅಧ್ಯಕ್ಷ ನಾಗೇಶ್ ಪಿ. ನಾಯಕ್ ಅವರು ಪೇಟೆ ಮಲ್ಲಿಕಾರ್ಜುನ ದೇವಾಲಯದ ಆಡಳಿತ ಸಮಿತಿಯ ಡಾ. ವೆಂಕಟ್ರಮಣ ಹೊಳ್ಳರಿಗೆ ನೀಡಿ ಪತ್ರಿಕೆ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಪಾಂಗೋಡು ಪ್ರವೀಣ ನಾಯಕ, ಕೋಟೆ ದೂಮಾವತಿ ಉತ್ಸವ ಸಮಿತಿ ಅಧ್ಯಕ್ಷ ನವೀನ್ ನಾಯಕ, ಕೋಶಾಧಿಕಾರಿ ಡಾ. ವಾಮನ್ ರಾವ್ ಬೇಕಲ್, ಜಯಾನಂದ ಕುಮಾರ್, ಅರಿಬೈಲ್ ಗೋಪಾಲ ಶೆಟ್ಟಿ, ಶ್ರೀಧರ್ ಶೆಟ್ಟಿ ಮುಟ್ಟಂ, ಅಖಿಲೇಶ್ ನಗುಮುಗಮ್, ವೀಜಿ ಕಾಸರಗೋಡು, ಜಗನ್ನಾಥ್ ಶೆಟ್ಟಿ ಪಿ. ಕೆ, ವಿಶಾಲಾಕ್ಷ ಪುತ್ರಕಳ, ಶ್ರೀಕಾಂತ ನಾಯಕ, ರಾಮರಾಜ ಕ್ಷತ್ರಿಯ ಯಾನೆ ಕೋಟೆಯರ್ ಜಿಲ್ಲಾಧ್ಯಕ್ಷ ಪ್ರದೀಪ್ ಬೇಕಲ್ ಇದ್ದರು. ಸಾಮಾಜಿಕ ಮುಂದಾಳು ಶ್ರೀ ಜಗದೀಶ್ ಕೂಡ್ಲು ನಿರೂಪಿಸಿದರು ಪ್ರದೀಪ್ ನಾಯಕ್ ಸ್ವಾಗತಿಸಿ, ರಮೇಶ್ ಕುಂಬಳೆ ವಂದಿಸಿದರು.


