ಕೊಚ್ಚಿ: ಬುಡಕಟ್ಟು ಸಂಸ್ಕøತಿ ಮತ್ತು ಸಂಪ್ರದಾಯದ ಸಂಕೇತವಾದ ಗಡ್ಡಿಕಾ 2025 ಯಶಸ್ವಿಯಾಗಿ ಮುಕ್ತಾಯಗೊಂಡಿತು. ಜವಾಹರಲಾಲ್ ನೆಹರು ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ವಾರಪೂರ್ತಿ ನಡೆದ ಪ್ರದರ್ಶನ, ಮಾರುಕಟ್ಟೆ ಮೇಳ ಮತ್ತು ಕಲಾ ಉತ್ಸವಗಳನ್ನು ವೀಕ್ಷಿಸಲು ಮತ್ತು ಆನಂದಿಸಲು ಅನೇಕ ಜನರು ಪ್ರತಿದಿನ ಆಗಮಿಸಿದ್ದರು.
ಗಡ್ಡಿಕಾದ ಪ್ರತಿ ದಿನವೂ ವಿವಿಧ ಬುಡಕಟ್ಟು ಕಲಾ ಪ್ರಕಾರಗಳನ್ನು ಪ್ರದರ್ಶಿಸಲಾಯಿತು. ಗಡ್ಡಿಕ, ಪಲಿಯ ನೃತ್ಯಂ, ಕೊರಗ ನೃತ್ಯಂ, ಪಟ್ಟುವಾಜಿ, ಕಂಜೂರು ನಟ್ಟುಪೆÇೀಲಿಮ, ಪರುಂತಟ್ಟಂ, ಚಿಮ್ಮನ ಕಲಿ, ಮಾರಿತೀಯಂ, ಗೋತ್ರ ಗೀತಿಕಾ, ತುಯಿಲುನರ್ತು ಪಟ್ಟು, ಉರಳಕುತ್ತು, ನಾಗಕಲಿ, ವೆಳ್ಳಟ್ಟಂ ಮುಂತಾದ ವಿವಿಧ ಕಲಾ ಪ್ರಕಾರಗಳು ಪ್ರೇಕ್ಷಕರಿಗೆ ಹೊಸ ಅನುಭವವನ್ನು ನೀಡಿತು.
ಪ್ರತಿಯೊಂದು ಪ್ರದರ್ಶನವು ಬುಡಕಟ್ಟು ಜನರ ಜೀವನಶೈಲಿ, ಪದ್ಧತಿಗಳು ಮತ್ತು ನಂಬಿಕೆಗಳನ್ನು ಪ್ರತಿಬಿಂಬಿಸಿತು.
ಹಳೆಯ ಪೀಳಿಗೆಯಿಂದ ಹೊಸ ಪೀಳಿಗೆಗೆ ಸಾಂಪ್ರದಾಯಿಕ ಕಲೆಗಳ ವರ್ಗಾವಣೆಗೆ ಗಡ್ಡಿಕ ವೇದಿಕೆಯಾಯಿತು. ಗಡ್ಡಿಕ ಕಳೆದ ಏಳು ದಿನಗಳಲ್ಲಿ 30 ಕ್ಕೂ ಹೆಚ್ಚು ಸಾಂಪ್ರದಾಯಿಕ ಕಲೆಗಳನ್ನು ಪ್ರದರ್ಶಿಸಲಾಯಿತು.
ಈ ಕಾರ್ಯಕ್ರಮವು ನಶಿಸುತ್ತಿದ್ದ ಅನೇಕ ಕಲಾ ಪ್ರಕಾರಗಳನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡಿತು.
ಕಲಾ ಪ್ರಕಾರಗಳಂತೆ, ಮಳಿಗೆಗಳು ಸಹ ಗಡ್ಡಿಕದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದ್ದವು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕರಕುಶಲ ವಸ್ತುಗಳು, ಸಾಂಪ್ರದಾಯಿಕ ಆಭರಣಗಳು, ಬಿದಿರಿನ ಉತ್ಪನ್ನಗಳು, ಅರಣ್ಯ ಸಂಪನ್ಮೂಲಗಳು ಮತ್ತು ನೈಸರ್ಗಿಕ ಉತ್ಪನ್ನಗಳು ಮಳಿಗೆಗಳಲ್ಲಿ ಲಭ್ಯವಿದ್ದವು.
ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಅವಕಾಶವು ಕಲಾವಿದರಿಗೆ ಉತ್ತಮ ಪೆÇ್ರೀತ್ಸಾಹವಾಗಿತ್ತು. ಕಲಾತ್ಮಕ ಪ್ರದರ್ಶನಗಳ ಜೊತೆಗೆ, ವಿಶಿಷ್ಟ ಭಕ್ಷ್ಯಗಳನ್ನು ತಯಾರಿಸಿದ ರೆಸ್ಟೋರೆಂಟ್‍ಗಳು ಸಹ ಗಡ್ಡಿಕಾದ ವಿಶೇಷ ಲಕ್ಷಣವಾಗಿತ್ತು.
ಬೇರೆ ಬೇರೆ ದಿನಗಳಲ್ಲಿ, ಸಚಿವರಾದ ಕಡನ್ನಪಳ್ಳಿ ರಾಮಚಂದ್ರನ್ ಮತ್ತು ಒ.ಆರ್. ಕೇಲು ಅವರು ಗಡ್ಡಿಕಾಗೆ ಭೇಟಿ ನೀಡಿ ಕಲಾವಿದರೊಂದಿಗೆ ಸಂವಾದ ನಡೆಸಿದರು.




