ಜಮ್ಮು: ಆಕಸ್ಮಿಕವಾಗಿ ಗಡಿ ಪ್ರವೇಶಿಸಿದ್ದ ಪಾಕಿಸ್ತಾನದ ಪ್ರಜೆಯೊಬ್ಬರನ್ನು ಗಡಿ ಭದ್ರತಾ ಪಡೆಯು ಮರಳಿ ಪಾಕಿಸ್ತಾನಕ್ಕೆ ಶುಕ್ರವಾರ ಕಳುಹಿಸಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಗಡಿ ಪ್ರವೇಶಿಸಿದ್ದ ಮೊಹಮ್ಮದ್ ಅಕ್ರಂ ಅವರನ್ನು ಜಮ್ಮುವಿನ ಆರ್.ಎಸ್.ಪುರ ಹೊರವಲಯದಲ್ಲಿ ಸೆಪ್ಟೆಂಬರ್ 25ರಂದು ವಶಕ್ಕೆ ಪಡೆಯಲಾಗಿತ್ತು.
ಯಾವುದೇ ಅನುಮಾನಾಸ್ಪದ ವಸ್ತುಗಳು ಅವರ ಬಳಿ ಇರಲಿಲ್ಲ. ಆಕಸ್ಮಿಕವಾಗಿ ಗಡಿ ಪ್ರವೇಶಿಸಿರುವುದು ತನಿಖೆಯಿಂದ ಖಚಿತವಾದ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.




