HEALTH TIPS

ಸರ್ವಿಸ್ ವಯರಲ್ಲಿ ಸಿಲುಕಿಕೊಂಡಿದ್ದ ತೆಂಗಿನಗರಿ ತೆಗೆಯುವ ಮಧ್ಯೆ ಬಾವಿಗೆ ಬಿದ್ದು ವಿದ್ಯಾರ್ಥಿ ಮೃತ್ಯು

ಕಾಸರಗೋಡು: ಮನೆ ಸನಿಹದ ಬಾವಿಯ ಮೇಲ್ಭಾಗದಿಂದ ಹಾದುಹೋಗಿದ್ದ ವಿದ್ಯುತ್ ಸರ್ವೀಸ್ ವಯರಿಗೆ ಸಿಲುಕಿಕೊಂಡಿದ್ದ ತೆಂಗಿನಗರಿ ತೆಗೆಯಲು ಬಾವಿ ಕಟ್ಟೆಯೇರಿದ್ದ ಸಂದರ್ಭ ಆಯತಪ್ಪಿ ಬಿದ್ದ ವಿದ್ಯಾರ್ಥಿ ದಾರುಣವಾಗಿ ಮೃತಪಟ್ಟಿದ್ದಾನೆ. ಉದುಮ ನಾಲಾಂವಾದುಕ್ಕಲ್ ವಲಿಯ ವಳಪ್ಪ್ ನಿವಾಸಿ, ಹೋಟೆಲ್ ಮಾಲಿಕ ಅರವಿಂದನ್-ಅಂಬುಜಾಕ್ಷಿ ದಂಪತಿ ಪುತ್ರ ಅಶ್ವಿನ್ (18)ಮೃತಪಟ್ಟ ವಿದ್ಯಾರ್ಥಿ. 

ಬಾವಿಗೆ ಬಿದ್ದ ಅಶ್ವಿನ್ ಅವರನ್ನು ಅಗ್ನಿಶಾಮಕ ದಳದ ನೆರವಿನಿಮದ ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಿರಲಿಲ್ಲ.  



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries