ಕಾಸರಗೋಡು: ಮಾರಾಟಕ್ಕಾಗಿ ಮಾರಕ ಅಫೀಮು ಕೈವಶವಿರಿಸಿಕೊಮಡಿದ್ದ ಪ್ರಕರಣದ ಆರೋಪಿ ವಿದ್ಯಾನಗರ ಮುಟ್ಟತ್ತೋಡಿ ಎರ್ದುಂಕಡವು ನಿವಾಸಿ ಸಯ್ಯದ್ ಫ್ಯಾಸಿಸ್ ಎಂಬಾತನಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ(ದ್ವಿತೀಯ)ದ ನ್ಯಾಯಾಧೀಶೆ ಕೆ.ಪ್ರಿಯಾ ಎರಡುವರ್ಚಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪಿತ್ತಿದ್ದಾರೆ. ವಿದ್ಯಾನಗರ ಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 79.3ಗ್ರಾಂ ಅಫೀಮು ವಶಪಡಿಸಿಕೊಂಡು, ಸಯ್ಯದ್ ಫ್ಯಾಸಿಸ್‍ನನ್ನು ಬಂಧಿಸಿದ್ದರು.




