ಕಾಸರಗೋಡು: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ 27ನೇ ವರ್ಷದ ಭಜನಾ ತರಬೇತಿ ಕಮ್ಮಟದಲ್ಲಿ ಶ್ರೇಷ್ಟ ಭಜನಾ ಮಂಡಳಿಗೆ ಕೊಡುವಂತಹ ಸಾಧಕ ಪ್ರಶಸ್ತಿಯನ್ನು ಭಜನಾ ಕಮ್ಮಟದ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಧರ್ಮಾಧಿಕಾರಿ ಪದ್ಮಶ್ರೀ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ಅಮ್ಮನವರು ತಮ್ಮ ದಿವ್ಯ ಹಸ್ತದಿಂದ ಕಾಸರಗೋಡು ತಾಲೂಕಿನ ಸೂರ್ಲು ಶ್ರೀ ಗಣೇಶ ಭಜನಾ ಸಂಘದ ಭಜಕರು ಪುರಸ್ಕಾರ ಸ್ವೀಕರಿಸಿದರು.
ಈ ಸಂದರ್ಭ ಕಾಸರಗೋಡು ತಾಲೂಕು ಭಜನಾ ಪರಿಷತ್ತಿನ ಅಧ್ಯಕ್ಷ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ, ಶ್ರೀಗಣೇಶ ಮಂದಿರದ ಪದಾಧಿಕಾರಿಗಳಾದ ಸೀತಾರಾಮ ಸೂರ್ಲು, ವಸಂತ ಪಾರೆಕಟ್ಟ, ರಾಮಕೃಷ್ಣ, ರಘುರಾಮ, ರಮೇಶ ಸೂರ್ಲು, ಸಂತೋಷ್ ಕೋಟೆ ಕಣಿ, ಸೂರ್ಲು ವಸಂತ ಶೆಟ್ಟಿ, ಸೀತಾರಾಮ, ಪ್ರಫುಲ್ಲ, ರಮಣಿ, ಜಲಜ, ಸುಮಾ, ನಾಗವೇಣಿ, ಸೌಮ್ಯ ಮೊದಲಾದವರು ಉಪಸ್ಥಿತರಿದ್ದರು.





