ಉಪ್ಪಳ: ಮಂಗಲ್ಪಾಡಿ ಸೋಂಕಾಲು ನಿವಾಸಿ, ಉಪ್ಪಳದ ಸೂಪರ್ ಮಾರ್ಕೆಟ್ ಕಾರ್ಮಿಕ ಕೃಪೇಶ್(22)ನಾಪತ್ತೆಯಾಘಿರುವ ಬಗ್ಗೆ ಮಂಜೇಶ್ವರ ಠಾಣೆ ಪೊಲೀಸರು ಕೇಸು ದಆಖಲಿಸಿಕೊಂಡಿದ್ದಾರೆ. ಎಂದಿನಂತೆ ಕೆಲಸಕ್ಕೆ ತೆರಳಿದ್ದ ಕೃಪೇಶ್, ಔಷಧ ಖರೀದಿಸಲಿರುವುದಾಗಿ ತಿಳಿಸಿ ಸೂಪರ್‍ಮಾರ್ಕೆಟ್‍ನಿಂದ ಹೊರ ಹೋದವರು ವಾಪಸಾಗಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ. ನಂತರ ಇವರ ಮೊಬೈಲ್ ಸ್ವಿಚ್ ಆಫ್ ಆಗಿರುವುದು ಆತಂಕಕ್ಕೆ ಕಾರಣವಾಗಿತ್ತು. ಪೊಲೀಸರು ಹಾಗೂ ಕೃಪೇಶ್ ಸಂಬಂಧಿಕರು ಹುಡುಕಾಟ ನಡೆಸುತ್ತಿದ್ದಾರೆ.




