HEALTH TIPS

'ಗಾರ್ಬಾ' ನೃತ್ಯ ಮಾಡುತ್ತಿದ್ದ ಮಹಿಳೆ ಕುಸಿದು ಬಿದ್ದು ಸಾವು

ಖಾರ್ಗೋನ್: ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯಲ್ಲಿ 'ಗಾರ್ಬಾ' ನೃತ್ಯ ಕಾರ್ಯಕ್ರಮದಲ್ಲಿ 19 ವರ್ಷದ ನವವಿವಾಹಿತೆಯೊಬ್ಬರು ತನ್ನ ಪತಿಯೊಂದಿಗೆ ನೃತ್ಯ ಮಾಡುತ್ತಿದ್ದಾಗ ಕುಸಿದು ಬಿದ್ದು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಜಿಲ್ಲಾ ಕೇಂದ್ರದಿಂದ ಸುಮಾರು 55 ಕಿ.ಮೀ ದೂರದಲ್ಲಿರುವ ಬಿಕಾನ್ ಗ್ರಾಮದ ಸಂತ ಸಿಂಗಾಜಿ ದೇವಸ್ಥಾನದಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

ಪೊಲೀಸರಿಗೆ ಈ ಕುರಿತು ಮಾಹಿತಿ ಬಂದಿಲ್ಲವಾದರೂ. ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಘಟನೆಯ ವಿಡಿಯೊದಲ್ಲಿ, ಮಹಿಳೆ ತನ್ನ ಪತಿಯೊಂದಿಗೆ ದುರ್ಗಾ ವಿಗ್ರಹದ ಮುಂದೆ ವೇದಿಕೆಯಲ್ಲಿ ಬಾಲಿವುಡ್ ಹಾಡಿಗೆ ನೃತ್ಯ ಮಾಡುತ್ತಿರುವುದನ್ನು ಕಾಣಬಹುದು. ಕೆಲ ಕ್ಷಣಗಳ ನಂತರ, ಆಕೆ ನೆಲಕ್ಕೆ ಕುಸಿದು ಬಿದ್ದಿದ್ದಾರೆ. ಆರಂಭದಲ್ಲಿ ಪ್ರೇಕ್ಷಕರು ಇದನ್ನು ನೃತ್ಯದ ಭಾಗವೆಂದು ಭಾವಿಸಿ ನಗಲಾರಂಭಿಸಿದ್ದರು. ಬಳಿಕ, ಪತಿ ಆಕೆಯನ್ನು ಎಬ್ಬಿಸಲು ಪ್ರಯತ್ನಿಸಿದ್ದಾರೆ. ಆದರೆ, ಅವರು ಏಳದಿದ್ದಾಗ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪ್ರಾಣ ಹೋಗಿ ಬಹಳ ಸಮಯವಾಗಿದೆ ಎಂದು ವೈದ್ಯರು ಧೃಡಪಡಿಸಿದ್ದಾರೆ.

ಪರಿಚಯಸ್ಥರ ಪ್ರಕಾರ, ಮೃತ ಮಹಿಳೆಯನ್ನು ಸೋನಮ್ ಎಂದು ಗುರುತಿಸಲಾಗಿದೆ. ಸೋನಮ್ ಈ ವರ್ಷದ ಮೇ ತಿಂಗಳಲ್ಲಿ ಕೃಷ್ಣ ಪಾಲ್ ಅವರನ್ನು ವಿವಾಹವಾಗಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ಮಹಿಳೆಯು ಜನರ ಮುಂದೆಯೇ ಮೃತಪಟ್ಟಿರುವುದರಿಂದ ಯಾವುದೇ ಸಂಚಿನ ಅನುಮಾನವಿರಲಿಲ್ಲ. ಹಾಗಾಗಿ, ಮರಣೋತ್ತರ ಪರೀಕ್ಷೆ ನಡೆಸದೇ ಅಂತ್ಯಸಂಸ್ಕಾರ ಮಾಡಲಾಗಿದೆ.

ಸೋಮವಾರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೂಲಕವೇ ಘಟನೆಯ ಬಗ್ಗೆ ತಿಳಿದುಕೊಂಡೆವು. ಈ ಕುರಿತಂತೆ ಯಾವುದೇ ದೂರು ಬಂದಿಲ್ಲ ಎಂದು ಭಿಕಾನ್‌ಗಾಂವ್ ಠಾಣಾಧಿಕಾರಿ ಗುಲಾಬ್ ಸಿಂಗ್ ರಾವತ್ ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries