HEALTH TIPS

ವಿಶ್ವಸಂಸ್ಥೆಯ ವಿಶೇಷ ಅಧಿವೇಶನದಲ್ಲಿ ಫೆಲೆಸ್ತೀನ್ ಅಧ್ಯಕ್ಷರ ವೀಡಿಯೊ ಭಾಷಣಕ್ಕೆ ಅನುಮತಿ ನಿರ್ಣಯ ಬೆಂಬಲಿಸಿದ ಭಾರತ

ವಿಶ್ವಸಂಸ್ಥೆ: ಫೆಲೆಸ್ತೀನ್ ಅಧ್ಯಕ್ಷ ಮುಹಮ್ಮದ್ ಅಬ್ಬಾಸ್ ಅವರು ವೀಡಿಯೊ ಮೂಲಕ ಮುಂಬರುವ ವಿಶ್ವಸಂಸ್ಥೆಯ ವಿಶೇಷ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡುವುದಕ್ಕೆ ಅನುಮತಿ ನೀಡುವ ಕುರಿತ ನಿರ್ಣಯದ ಪರವಾಗಿ ಭಾರತ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಶುಕ್ರವಾರ ಮತಚಲಾಯಿಸಿದೆ.ವಿಶೇಷ ಅಧಿವೇಶನದಲ್ಲಿ ಪಾಲ್ಗೊಳ್ಳುವುದಕ್ಕೆ ಫೆಲೆಸ್ತೀನ್ ಅಧಿಕಾರಿಗಳಿಗೆ ಅಮೆರಿಕವು ವೀಸಾ ನಿರಾಕರಿಸಿದ ಹಿನ್ನೆಲೆಯಲ್ಲಿ ನಿರ್ಣಯವನ್ನು ಮತಕ್ಕೆ ಹಾಕಲಾಗಿತ್ತು.

'ಫೆಲೆಸ್ತೀನ್ ಆಡಳಿತದ ಪಾಲ್ಗೊಳ್ಳುವಿಕೆ' ಶೀರ್ಷಿಕೆಯ ಈ ನಿರ್ಣಯವನ್ನು 193 ಸದಸ್ಯಬಲದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 80ನೇ ಅಧಿವೇಶನದಲ್ಲಿ ಅಂಗೀಕರಿಸಲಾಯಿತು. 145 ರಾಷ್ಟ್ರಗಳು ನಿರ್ಣಯದ ಪರವಾಗಿ ಮತಚಲಾಯಿಸಿದರೆ, 5 ದೇಶಗಳು ವಿರೋಧಿಸಿದವು ಹಾಗೂ ಆರು ರಾಷ್ಟ್ರಗಳು ಗೈರಾಗಿದ್ದವು. ನಿರ್ಣಯವನ್ನು ವಿರೋಧಿಸಿದ ದೇಶಗಳಲ್ಲಿ ಅಮೆರಿಕ ಹಾಗೂ ಇಸ್ರೇಲ್ ಒಳಗೊಂಡಿದ್ದವು.

ಅಧ್ಯಕ್ಷ ಮುಹಮ್ಮದ್ ಅಬ್ಬಾಸ್ ಸೇರಿದಂತೆ ಫೆಲೆಸ್ತೀನ್ ಪ್ರತಿನಿಧಿಗಳಿಗೆ ವೀಸಾವನ್ನು ನಿರಾಕರಿಸುವ ಹಾಗೂ ವೀಸಾಗಳನ್ನು ರದ್ದುಪಡಿಸುವ ಮೂಲಕ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳದಂತೆ ಮಾಡುವ ಅಮೆರಿಕ ಸರಕಾರದ ಕ್ರಮದ ಬಗ್ಗೆ ನಿರ್ಣಯವು ವಿಷಾದ ವ್ಯಕ್ತಪಡಿಸಿತು.

''ವಿಶ್ವಸಂಸ್ಥೆಯ ವಿಶೇಷ ಅಧಿವೇಶನಕ್ಕಾಗಿ ಫೆಲೆಸ್ತೀನ್ ಅಧ್ಯಕ್ಷರ ರೆಕಾರ್ಡ್ ಮಾಡಲಾದ ವೀಡಿಯೊ ಭಾಷಣವನ್ನು ಫೆಲೆಸ್ತೀನ್ ಆಡಳಿತವು ಸಲ್ಲಿಸಬಹುದಾಗಿದ್ದು,ಅದನ್ನು ಸಾಮಾನ್ಯಸಭೆಯ ಹಾಲ್‌ನಲ್ಲಿ ಭಿತ್ತರಿಸಲಾಗುವುದು'' ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.

ವಿಶ್ವಸಂಸ್ಥೆಯ ವಿಶೇಷ ಅಧಿವೇಶನದಲ್ಲಿ ಫೆಲೆಸ್ತೀನ್ ನಿಯೋಗದ ನೇತೃತ್ವವನ್ನು ವಹಿಸಲು ಹಾಗೂ ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲಿ ಭಾಷಣ ಮಾಡುವುದಕ್ಕಾಗಿ ಅಮೆರಿಕಕ್ಕೆ ಪ್ರಯಾಣಿಸಲು ಫೆಲೆಸ್ತೀನ್ ಅಧ್ಯಕ್ಷರ ವೀಸಾವನ್ನು ಪುನರೂರ್ಜಿತಗೊಳಿಸಬೇಕೆಂದು ಫೆಲೆಸ್ತೀನ್ ಆಡಳಿತವು ವಾಶಿಂಗ್ಟನ್ ಅನ್ನು ಆಗ್ರಹಿಸಿದ ಕೆಲವೇ ವಾರಗಳ ಬಳಿಕ ಈ ಬೆಳವಣಿಗೆಯಾಗಿದೆ.

ರಾಷ್ಟ್ರೀಯ ಭದ್ರತಾ ಕಳವಳಗಳನ್ನು ಉಲ್ಲೇಖಿಸಿ ಅಮೆರಿಕದ ವಿದೇಶಾಂಗ ಇಲಾಖೆಯು ಅಬ್ಬಾಸ್ ಸೇರಿದಂತೆ 80 ಮಂದಿ ಫೆಲೆಸ್ತೀನ್ ಅಧಿಕಾರಿಗಳ ವೀಸಾವನ್ನು ರದ್ದುಪಡಿಸಿತ್ತು.

ಫ್ರಾನ್ಸ್ ಹಾಗೂ ಸೌದಿ ಆರೇಬಿಯ ಆತಿಥ್ಯದಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯಸಭೆಯ ವಿಶೇಷ ಅಧಿವೇಶನದಲ್ಲಿ ವಿವಿಧ ರಾಷ್ಟ್ರಗಳ ನಾಯಕರ ಭಾಷಣ ಕಾರ್ಯಕ್ರಮವು ಸೋಮವಾರ ಆರಂಭಗೊಳ್ಳಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries