ತಿರುವನಂತಪುರಂ: ರಾಜ್ಯದಲ್ಲಿ ಪೋಲೀಸರ ದೌರ್ಜನ್ಯವನ್ನು ಪ್ರತಿಭಟಿಸಿ ವಿಧಾನಸಭೆಗೆ ನಿನ್ನೆ ಕೆಎಸ್‍ಯು ನಡೆಸಿದ ಪ್ರತಿಭಟನೆಯ ವೇಳೆ ಘರ್ಷಣೆ ನಡೆದಿದೆ.
ಪೋಲೀಸರ ಮೇಲೆ ಕಾರ್ಯಕರ್ತರು ಕೋಲು ಮತ್ತು ಕಲ್ಲುಗಳನ್ನು ತೂರಿದರು. ಇದರೊಂದಿಗೆ ಪ್ರತಿಭಟನಾಕಾರರ ಮೇಲೆ 17 ಬಾರಿ ಜಲಫಿರಂಗಿಗಳನ್ನು ಹಾರಿಸಲಾಯಿತು.
ಆದಾಗ್ಯೂ, ಪ್ರತಿಭಟನಾಕಾರರು ಮತ್ತೆ ಗುಂಪುಗೂಡಿದರು, ಪೋಲೀಸರು ಮತ್ತು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಹಲವಾರು ಮಹಿಳಾ ಕಾರ್ಯಕರ್ತರು ಸಹ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕಾರ್ಯಕರ್ತರು ಬ್ಯಾರಿಕೇಡ್ ದಾಟಲು ಪ್ರಯತ್ನಿಸಿದರು, ಇದು ಘರ್ಷಣೆಗೆ ಕಾರಣವಾಯಿತು.




