ಮಾಲೆ: ಸರಕು ಸಾಗಣೆಯ ಹಡಗಿನಿಂದ ಭಾರತೀಯರೊಬ್ಬರು ಮಾಲ್ದೀವ್ಸ್ ಸಮೀಪದ ಸಮುದ್ರಕ್ಕೆ ಸೋಮವಾರ ಬಿದ್ದಿದ್ದು, ನಾಪತ್ತೆ ಆಗಿದ್ದಾರೆ.
ಭಾರತದ ಧ್ವಜ ಹೊಂದಿರುವ ಎಂಎಸ್‌ವಿ ದೌಲಾ ಹಡಗಿನ ಸಿಬ್ಬಂದಿಯೊಬ್ಬರು, ವಿಲಿಮಾಲೆಯಿಂದ ಉತ್ತರಕ್ಕೆ ಒಂದು ಕಿ.ಮೀ. ದೂರದಲ್ಲಿ ಸಮುದ್ರಕ್ಕೆ ಬಿದ್ದಿದ್ದಾರೆ ಎಂದು ಸನ್.ಎಂವಿ ನ್ಯೂಸ್ ಪೋರ್ಟಲ್ ಮಂಗಳವಾರ ವರದಿ ಮಾಡಿದೆ.
ಸೋಮವಾರ ರಾತ್ರಿ 11.35ರ ವೇಳೆಗೆ ಮಾಲ್ದೀವ್ಸ್ ರಕ್ಷಣಾ ಪಡೆಗೆ ಘಟನೆಯ ಮಾಹಿತಿ ದೊರೆತಿದೆ. ತಕ್ಷಣವೇ ಕರಾವಳಿ ಪಡೆಯು ಶೋಧ ಆರಂಭಿಸಿದ್ದು, ನಾಪತ್ತೆಯಾದ ವ್ಯಕ್ತಿ ಪತ್ತೆ ಆಗಿಲ್ಲ. ಶೋಧ ಮುಂದುವರಿದಿದೆ.




