ನವದೆಹಲಿ: ಅರ್ಜೆಂಟೀನಾದ ಫುಟ್‌ಬಾಲ್ ತಾರೆ ಲಯೊನೆಲ್ ಮೆಸ್ಸಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ 75ನೇ ವರ್ಷದ ಹುಟ್ಟುಹಬ್ಬಕ್ಕೆ 2022ರ ವಿಶ್ವಕಪ್ ಟೂರ್ನಿಯಲ್ಲಿ ಧರಿಸಿದ್ದ ಜೆರ್ಸಿಯನ್ನು ಉಡುಗೊರೆಯಾಗಿ ಕಳುಹಿಸಿದ್ದಾರೆ.
'ಭಾರತ ಭೇಟಿ ಸಂಬಂಧ ಮೆಸ್ಸಿ ಅವರೊಂದಿಗೆ ಕಳೆದ ಫೆಬ್ರುವರಿಯಲ್ಲಿ ಮಾತನಾಡುವ ವೇಳೆ, ಪ್ರಧಾನಿ ಮೋದಿಯವರ 75ನೇ ಹುಟ್ಟುಹಬ್ಬದ ಬಗ್ಗೆ ಪ್ರಸ್ತಾಪಿಸಿದ್ದೆ. ಆಗ, ಹಸ್ತಾಕ್ಷರವುಳ್ಳ ಜೆರ್ಸಿಯನ್ನು ಪ್ರಧಾನಿಯವರಿಗೆ ಉಡುಗೊರೆಯಾಗಿ ನೀಡುವುದಾಗಿ ಮೆಸ್ಸಿ ಹೇಳಿದ್ದರು' ಎಂದು ದತ್ತಾ ಪಿಟಿಐಗೆ ತಿಳಿಸಿದ್ದಾರೆ.
'ಉಡುಗೊರೆಯು ಇನ್ನು ಎರಡು ಮೂರು ದಿನಗಳಲ್ಲಿ ಪ್ರಧಾನಿಯವರಿಗೆ ತಲುಪಲಿದೆ. ಮೆಸ್ಸಿ ಅವರು ಭಾರತಕ್ಕೆ ಬಂದಾಗ ಮೋದಿ ಅವರೊಂದಿಗೆ ಭೇಟಿ ಏರ್ಪಡಿಸುವ ಬಗ್ಗೆಯೂ ಕಾರ್ಯೋನ್ಮುಖನಾಗಿದ್ದೇನೆ' ಎಂದೂ ಅವರು ಹೇಳಿದ್ದಾರೆ.
ಮೆಸ್ಸಿ ಅವರು 'ಗೋಟ್ ಟೂರ್ ಆಫ್ ಇಂಡಿಯಾ' ಕಾರ್ಯಕ್ರಮದ ಅಂಗವಾಗಿ ಡಿಸೆಂಬರ್‌ನಲ್ಲಿ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ.




