ಚಂಡೀಗಢ: ವಿದ್ಯಾರ್ಥಿ ವೀಸಾ ಆಧಾರದಲ್ಲಿ ಕಳೆದ ವರ್ಷ ರಷ್ಯಾಕ್ಕೆ ತೆರಳಿದ್ದ ಪಂಜಾಬ್‌ನ ಮೊಗಾ ಜಿಲ್ಲೆಯ 25 ವರ್ಷದ ಯುವಕನನ್ನು ಅಲ್ಲಿನ ಸೇನೆಗೆ ನೇಮಿಸಿಕೊಂಡು, ರಷ್ಯಾ-ಉಕ್ರೇನ್ ಯುದ್ಧಕ್ಕೆ ಕಳುಹಿಸಲಾಗಿದೆ ಎಂದು ಯುವಕನ ಕುಟುಂಬಸ್ಥರು ದೂರಿದ್ದಾರೆ.
ಬುಟಾ ಸಿಂಗ್ ಅವರನ್ನು ಸುರಕ್ಷಿತವಾಗಿ ಕರೆತರಲು ಕೇಂದ್ರ ಸರ್ಕಾರ ನೆರವು ನೀಡಬೇಕು ಎಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ.




