ಮಲಪ್ಪುರಂ: ಮಂಜೇರಿ ವೈದ್ಯಕೀಯ ಕಾಲೇಜಿನಲ್ಲಿ ಮತ್ತೆ ಸಂಬಳ ಲಭಿಸುತ್ತಿಲ್ಲ ಎಂದು ಸಚಿವರಿಗೆ ದೂರು ನೀಡಿದ ತಾತ್ಕಾಲಿಕ ನೌಕರರನ್ನು ಪೋಲೀಸರು ಕರೆಸಿದ ಘಟನೆ ವರದಿಯಾಗಿದೆ. ನೌಕರರು ತಮಗೆ ಸಂಬಳ ಲಭಿಸುತ್ತಿಲ್ಲ ಎಂದು ತಿಳಿಸಿದರು. ಬಳಿಕ ಪೋಲೀಸರು ತಮ್ಮನ್ನು ಪ್ರತಿಗಳನ್ನಾಗಿಸಿದರೆಂದು ನೌಕರರು ಅವಲತ್ತುಕೊಂಡಿರುವರು.
ಸಚಿವೆ ವೀಣಾ ಜಾರ್ಜ್ ಆಸ್ಪತ್ರೆಗೆ ಬಂದಾಗ ತಾತ್ಕಾಲಿಕ ನೌಕರರು ತಮಗೆ ಸಂಬಳ ಸಿಗುತ್ತಿಲ್ಲ ಎಂದು ಸಚಿವರಿಗೆ ತಿಳಿಸಿದರು.
ಕೆಲವು ಯೋಜನೆಗಳನ್ನು ಉದ್ಘಾಟಿಸಲು ಸಚಿವೆ ವೀಣಾ ಜಾರ್ಜ್ ಆಗಸ್ಟ್ 12 ರಂದು ಮಂಜೇರಿ ವೈದ್ಯಕೀಯ ಕಾಲೇಜಿಗೆ ಆಗಮಿಸಿದ್ದರು.
ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದಾಗ ಸಚಿವರಿಗೆ ದೂರು ನೀಡಿ ಅಲ್ಲಿಂದ ತೆರಳಿದರು. ನಂತರ, ಇಡೀ ಸಿಬ್ಬಂದಿ ಹೊರಬಂದು ಪ್ರತಿಭಟಿಸಿದರು. ಘಟನೆಯಲ್ಲಿ ಪೆÇಲೀಸರು ಈ ಹಿಂದೆ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಘಟನೆಯಲ್ಲಿಯೇ ಪೋಲೀಸರು ಮತ್ತೆ ನೌಕರರನ್ನು ಕರೆಸಿದರು. ಪ್ರಕರಣವನ್ನು ಮುಂದುವರೆಸುತ್ತಿದ್ದೇವೆ ಮತ್ತು ನೌಕರರ ಹೆಸರುಗಳನ್ನು ಸಂಗ್ರಹಿಸುತ್ತಿದ್ದೇವೆ ಎಂದು ಪೆÇಲೀಸರು ತಿಳಿಸಿದ್ದಾರೆ. ಪ್ರಕರಣವನ್ನು ಮುಂದುವರಿಸಲು ಪೆÇಲೀಸರ ಮೇಲೆ ಒತ್ತಡವಿದೆ ಎಂದು ವರದಿಯಾಗಿದೆ.




