ಸುಲ್ತಾನಪುರ: ಕೇಂದ್ರ ಗೃಹ ಸಚಿವ ಅಮಿತ್ ಶಾ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ರಾಹುಲ್ ಪರ ವಕೀಲರು, ಸಾಕ್ಷಿಯೊಬ್ಬರನ್ನು ಮಂಗಳವಾರ ಪಾಟಿ ಸವಾಲಿಗೆ ಒಳಪಡಿಸಿದರು.
ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಪ್ರಕರಣದ ವಿಚಾರಣೆ ಇಲ್ಲಿನ ಸಂಸದರು ಹಾಗೂ ಶಾಸಕರ ಕೋರ್ಟ್‌ನಲ್ಲಿ ನಡೆಯುತ್ತಿದೆ.
2018ರಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ, ಪ್ರಚಾರಸಭೆಯಲ್ಲಿ ಪಾಲ್ಗೊಂಡಿದ್ದ ರಾಹುಲ್ ಗಾಂಧಿ ಅವರು ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ದೂರಿ, ಉತ್ತರ ಪ್ರದೇಶದ ಪೀತಾಂಬರಪುರ ಕಾಲಾ ಗ್ರಾಮದ ಅನಿಲ್ ಮಿಶ್ರಾ ಅವರು ಪ್ರಕರಣ ದಾಖಲಿಸಿದ್ದಾರೆ.
'ಅನಿಲ್ ಮಿಶ್ರಾ ಅವರನ್ನು ಪಾಟಿ ಸವಾಲಿಗೆ ಒಳಪಡಿಸಲಾಗಿದ್ದು, ಮತ್ತೊಬ್ಬ ಸಾಕ್ಷಿದಾರ ರಾಮಚಂದ್ರ ದುಬೆ ಅವರ ಪಾಟಿ ಸವಾಲನ್ನು ಅಕ್ಟೋಬರ್ 9ರಂದು ನಡೆಸಲಾಗುತ್ತದೆ' ಎಂದು ರಾಹುಲ್ ಪರ ವಕೀಲ ಕಾಶಿಪ್ರಸಾದ್ ಶುಕ್ಲಾ ಹೇಳಿದ್ದಾರೆ.




