ಕಾಸರಗೋಡು: ಜಿಲ್ಲಾ ಪ್ರವಾಸೋದ್ಯಮ ಪ್ರಚಾರ ಮಂಡಳಿ ಕಾಸರಗೋಡು, ಭಾರತೀಯ ಪ್ರವಾಸೋದ್ಯಮ ವಲಯ ಕಚೇರಿ ಕೊಚ್ಚಿ ಇವುಗಳ ಜಂಟಿ ಆಶ್ರಯದಲ್ಲಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನ ಪಿ.ಜಿ. ಟ್ರಾವೆಲ್ ಆಂಡ್ ಟೂರಿಸಂ ಮೇನೇಜ್ಮೆಂಟ್ ವಿಭಾಗದ ನೇತೃತ್ವದಲ್ಲಿ ಆಯೋಜಿಸಿದ್ದ ನಾಲ್ಕು ದಿನಗಳ ಜಿಲ್ಲಾ ಮಟ್ಟದ ಪ್ರವಾಸೋದ್ಯಮ ದಿನಾಚರಣೆ ಶನಿವಾರ ಮುಕ್ತಾಯಗೊಂಡಿತು.
ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ಆಯೋಜಿಸಲಾದ ''ಮೆರಾಕಿ 2'' ಕಾರ್ಯಕ್ರಮದ ಸಮಾರೋಪ ಅಧಿವೇಶನವನ್ನು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಜಿಲ್ಲೆಯ ಪ್ರವಾಸೋದ್ಯಮ ಸಾಮಥ್ರ್ಯವನ್ನು ಸರಿಯಾಗಿ ಬಳಸಿಕೊಳ್ಳಬೇಕು. ಕಾಸರಗೋಡು ನದಿಗಳ ನಾಡು. ಪರಿಸರ ಪ್ರವಾಸೋದ್ಯಮ ಮತ್ತು ಪರಂಪರೆ ಪ್ರವಾಸೋದ್ಯಮಕ್ಕೆ ಅನಂತ ಸಾಮಥ್ರ್ಯವಿದೆ ಎಂದು ಸಂಸದರು ಹೇಳಿದರು.
ಕಾಲೇಜು ಪ್ರಾಂಶುಪಾಲ ಡಾ. ಮುಹಮ್ಮದ್ ಅಲಿ ಕೆ. ಅಧ್ಯಕ್ಷತೆ ವಹಿಸಿದ್ದರು. ಪ್ರವಾಸೋದ್ಯಮ ವಿಭಾಗದ ಮುಖ್ಯಸ್ಥೆ ಮತ್ತು ಸಹ ಪ್ರಾಧ್ಯಾಪಕಿ ಡಾ. ಸಿಂಧು ಜೋಸೆಫ್ ಸುಸ್ಥಿರ ಪ್ರವಾಸೋದ್ಯಮದ ಮಹತ್ವವನ್ನು ವಿವರಿಸಿದರು. ಕಾಲೇಜು ಹೆಚ್ಚುವರಿ ಮಾಜಿ ನಿರ್ದೇಶಕಿ ಡಾ. ಜ್ಯೋತಿರಾಜ್, ಉಪ ಪ್ರಾಂಶುಪಾಲ ಡಾ. ಸಚೀಂದ್ರನ್ ವಿ., ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಶಮೀನಾ ಟೀಚರ್, ಡಿಟಿಪಿಸಿ ಕಾರ್ಯದರ್ಶಿ ಜಿಜೇಶ್ ಕುಮಾರ್ ಜೆ.ಕೆ. ಎಬಿನ್ ಕೆ.ಐ ಮತ್ತಿತರರು ಮಾತನಾಡಿದರು.
ಬಿಆರ್‍ಡಿಸಿ ಎಂಡಿ ಶಿಜಿನ್ ಪರಂಬತ್ ಅವರು ಇದಕ್ಕೂ ಮೊದಲು ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಉದ್ಘಾಟಿಸಿದ್ದರು. ಜಿಲ್ಲಾ ಮಟ್ಟದ ಪ್ರವಾಸೋದ್ಯಮ ದಿನಾಚರಣೆಯ ಭಾಗವಾಗಿ, ಅಂತರ ಕಾಲೇಜು ಪ್ರಯಾಣ ಮತ್ತು ಪ್ರವಾಸೋದ್ಯಮ ರಸಪ್ರಶ್ನೆ, ಅತ್ಯುತ್ತಮ ನಿರ್ವಹಣಾ ತಂಡ, ಗಮ್ಯಸ್ಥಾನ ಬ್ರ್ಯಾಂಡಿಂಗ್, ನೃತ್ಯ ಸ್ಪರ್ಧೆಗಳು, ಆನ್‍ಲೈನ್ ರೀಲ್‍ಗಳು ಮತ್ತು ಮೊಬೈಲ್ ಛಾಯಾಗ್ರಹಣ ಸ್ಪರ್ಧೆಗಳು, ಆಹಾರ ಉತ್ಸವ, ಸಾಂಸ್ಕøತಿಕ ಪರಂಪರೆ ಪ್ರವಾಸೋದ್ಯಮ ಪ್ರದರ್ಶನ ಮತ್ತು ಸಾಂಸ್ಕೃತಿಕ ಪ್ರದರ್ಶನ ನಡೆಯಿತು. ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಭಾಗವಾಗಿ ಶನಿವಾರ ಮಂಜೇಶ್ವರ ಬೀಚ್‍ನಲ್ಲಿ ಬೀಚ್ ಶುಚಿಗೊಳಿಸುವ ಅಭಿಯಾನವನ್ನು ಆಯೋಜಿಸಲಾಗಿತ್ತು. ಪ್ರವಾಸೋದ್ಯಮ ಕ್ಲಬ್ ಸ್ವಯಂಸೇವಕರ ಸಹಕಾರದೊಂದಿಗೆ ಸ್ವಚ್ಛತಾ ಚಟುವಟಿಕೆಯನ್ನು ನಡೆಸಲಾಯಿತು.
ಪ್ರಯಾಣ ಮತ್ತು ಪ್ರವಾಸೋದ್ಯಮ ರಸಪ್ರಶ್ನೆ ಪ್ರಥಮ ಸ್ಥಾನ: ಕಾಸರಗೋಡು ಸರ್ಕಾರಿ ಕಾಲೇಜು, ಎರಡನೇ ಸ್ಥಾನ: ಕುಣಿಯ ಕಲಾ ಮತ್ತು ವಿಜ್ಞಾನ ಕಾಲೇಜು, ಅತ್ಯುತ್ತಮ ನಿರ್ವಹಣಾ ತಂಡ ಕಣ್ಣೂರು ವಿಶ್ವವಿದ್ಯಾಲಯ ಕಾನೂನು ಅಧ್ಯಯನ ಕೇಂದ್ರ ಮಂಜೇಶ್ವರ ಕ್ಯಾಂಪಸ್, ಗಮ್ಯಸ್ಥಾನ ಬ್ರ್ಯಾಂಡಿಂಗ್ ಪ್ರಥಮ ಸ್ಥಾನ ಮಂಗಳೂರು ವಿಶ್ವವಿದ್ಯಾಲಯ ಕ್ಯಾಂಪಸ್, ಎರಡನೇ ಸ್ಥಾನ ಗೋವಿಂದ ಪೈ ಕಾಲೇಜು, ಗುಂಪು ನೃತ್ಯ ಪ್ರಥಮ ಸ್ಥಾನ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ, ಎರಡನೇ ಸ್ಥಾನ ಕಾಞಂಗಾಡ್ ನೆಹರು ಕಾಲೇಜು ಪಡೆದುಕೊಂಡರು.




.jpeg)
.jpeg)
