ಮಧೂರು: ಶ್ರೀ ಪುಷ್ಪಕ ಬ್ರಾಹ್ಮಣ ಸೇವಾ ಸಂಘದ 57 ನೇ ರಾಷ್ಟ್ರೀಯ ಸಮ್ಮೇಳನ 'ಪುಷ್ಪಕಾಯನ' ಸೆಪ್ಟೆಂಬರ್ 20 ಮತ್ತು 21 ರಂದು ಎರ್ನಾಕುಳಂ ತೃಪ್ಪುಣಿತ್ತರದ ಶ್ರೀ ಪೂರ್ಣ ಅಡಿಟೊರಿಯಂನಲ್ಲಿ ನಡೆಯಲಿದ್ದು ಸಿದ್ದತೆ ಭರದಿಂದ ಸಾಗುತ್ತಿದೆ. 20 ರಂದು ಧ್ವಜಾರೋಹಣದೊಂದಿಗೆ ಸಮ್ಮೇಳನ ಆರಂಭವಾಗಲಿದೆ. ಬಳಿಕ ನಡೆಯುವ ಕಲಾಸಂಧ್ಯಾ ಕಾರ್ಯಕ್ರಮವನ್ನು ಸಾಹಿತಿ ಸಿ. ರಾಧಾಕೃಷ್ಣನ್ ಉದ್ಘಾಟಿಸುವರು. ಕೇರಳ ಹೈಕೊರ್ಟ್ ಗೌರವ ನ್ಯಾಯಾಧೀಶ ನಾಗರೇಶ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು.
21 ರಂದು ನಡೆಯುವ ಪ್ರತಿನಿಧಿ ಸಮ್ಮೇಳನವನ್ನು ಪ್ರೊ.ಸರಿತಾ ಅಯ್ಯರ್ ಉದ್ಘಾಟಿಸುವರು. ಆಲ್ ಇಂಡಿಯಾ ಬ್ರಾಹ್ಮಣ ಫೆಡರೇಶನ್ ಅಧ್ಯಕ್ಷ ಡಾ. ಪ್ರದೀಪ್ ಜ್ಯೊತಿ ಭಾಗವಹಿಸುವರು. ಸಮಾರೋಪ ಸಮಾರಂಭವನ್ನು ಎಲ್ ಪಿ ವಿಷ್ವನಾಥನ್ ಉದ್ಘಾಟಿಸುವರು. ಟಿ.ಆರ್. ಹರಿನಾರಾಯಣ ವಿಷಯ ಕ್ರೋಢೀಕರಿಸಿ ಮಾತನಾಡುವರು.

